×
Ad

ಲಕ್ಷ್ಮಣ್ 281 ರನ್ ಟೆಸ್ಟ್‌ನಲ್ಲಿ 50 ವರ್ಷದಲ್ಲಿ ಶ್ರೇಷ್ಠ ಸಾಧನೆ

Update: 2016-01-04 23:18 IST


ಮುಂಬೈ, ಜ.4: ನಾಲ್ಕು ವರ್ಷಗಳ ಹಿಂದೆ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ 281 ರನ್ ಗಳಿಸಿರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ 50 ವರ್ಷಗಳಲ್ಲಿ ಟ್ರೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆಯಾಗಿದೆ.
  ಇಲ್ಲಿ ನಡೆದ ಮತದಾನವೊಂದರಲ್ಲಿ ಲಕ್ಷ್ಮಣ್ ಅವರದ್ದು ಶ್ರೇಷ್ಠ ಸಾಧನೆಯಾಗಿ ಆಯ್ಕೆಯಾಗಿದೆ. ಲಕ್ಷ್ಮಣ್ ದಾಖಲಿಸಿದ 281 ರನ್ ಕಳೆದ 50 ವರ್ಷಗಳಲ್ಲಿ ಟೆಸ್ಟ್‌ನಲ್ಲಿ ಅತ್ಯುತ್ತಮ ಸಾಧನೆ ಎಂಬ ಗೌರವಕ್ಕೆ ಪಾತ್ರವಾಗಿದೆ.ಈಡನ್ ಗಾರ್ಡನ್ಸ್‌ನಲ್ಲಿ 2001, ಮಾ.11ರಿಂದ 15ರ ತನಕ ನಡೆದ ಆಸ್ಟ್ರೇಲಿಯದ ವಿರುದ್ಧದ ಟೆಸ್ಟ್‌ನಲ್ಲಿ ಲಕ್ಷ್ಮಣ್ ಎರಡನೆ ಇನಿಂಗ್ಸ್‌ನಲ್ಲಿ 281 ರನ್(631ನಿ, 452ಎ, 44 ಬೌ) ಗಳಿಸಿದ್ದರು.
 
ಮೊದಲ ಇನಿಂಗ್ಸ್‌ನಲ್ಲಿ 59 ರನ್ ಗಳಿಸಿದ್ದ ಲಕ್ಷ್ಮಣ್ ಎರಡನೆ ಇನಿಂಗ್ಸ್‌ನಲ್ಲಿ ಗಳಿಸಿದ ದ್ವಿಶತಕ ನೆರವಿನಲ್ಲಿ ಭಾರತ 171 ರನ್‌ಗಳ ಜಯ ಗಳಿಸಿತ್ತು. ಮತದಾನದಲ್ಲಿ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಮತ್ತು ಪತ್ರಕರ್ತರು ಮತ ಚಲಾಯಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News