ಶೀಘ್ರವೇ ಬಿಸಿಸಿಐ ವಿಶೇಷ ಸಭೆ
Update: 2016-01-04 23:35 IST
ಹೊಸದಿಲ್ಲಿ, ಜ.4: ಜಸ್ಟಿಸ್ ಆರ್‌ಎಂ ಲೋಧಾ ಸಮಿತಿ ವರದಿಯ ಶಿಫಾರಸ್ಸಿಗೆ ವಿಚಲಿತಗೊಂಡಿರುವ ಬಿಸಿಸಿಐ ವರದಿಯನ್ನು ಜಾರಿಗೆ ತರುವ ಕುರಿತಂತೆ ಚರ್ಚಿಸಲು ಮುಂದಿನ ಎರಡು ವಾರಗಳಲ್ಲಿ ವಿಶೇಷ ಸಾಮಾನ್ಯ ಸಭೆ(ಎಜಿಎಂ) ಕರೆಯಲು ನಿರ್ಧರಿಸಿದೆ. ಶಶಾಂಕ್ ಮನೋಹರ್ ಮುಂಬೈಗೆ ತೆರಳಿದ್ದು, ಮಂಗಳವಾರ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಬಿಸಿಸಿಐನ ಉನ್ನತಾಧಿಕಾರಿಗಳು ಮಂಗಳವಾರ ಎಜಿಎಂ ನಡೆಸುವ ಕುರಿತು ನಿರ್ಧರಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
‘‘ತಾನು ವರದಿಯನ್ನು ನೋಡಿಲ್ಲ. ಲೋಧಾ ಸಮಿತಿಯ ವರದಿಯನ್ನು ಸಂಪೂರ್ಣವಾಗಿ ಓದದೇ ಯಾವ ಪ್ರಶ್ನೆಗೂ ಉತ್ತರಿಸಲಾರೆ’’ ಎಂದು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಸೋಮವಾರ ತಿಳಿಸಿದ್ದಾರೆ.