ಝೈನುದ್ದೀನ್ ಝೈದಾನ್ ರಿಯಲ್ ಮ್ಯಾಡ್ರಿಡ್ ಕೋಚ್
Update: 2016-01-05 10:17 IST
ಮ್ಯಾಡ್ರಿಡ್, ಜ.5: ರಿಯಲ್ ಮ್ಯಾಡ್ರಿಡ್ ತಂಡದ ಮುಖ್ಯ ಕೋಚ್ ಆಗಿ ಫ್ರಾನ್ಸ್‌ನ ಫುಟ್ಬಾಲ್ ದಂತಕತೆ ಝೈನುದ್ದೀನ್ ಝೈದಾನ್ ನೇಮಕಗೊಂಡಿದ್ದಾರೆ.
ತಂಡದ ಕೋಚ್ ಆಗಿದ್ದ ರಫೆಲ್ ಬೆನಿಟೆಝನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಿ ಝೈನುದ್ದೀನ್‌ಗೆ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ.
ಝೈನುದ್ದೀನ್ ಈ ಮೊದಲು ರಿಯಲ್ ಮ್ಯಾಡ್ರಿಡ್‌ನ ಬಿ ತಂಡ ಕ್ಯಾಸ್ಟಲ್‌ನ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಮ್ಯಾಡ್ರಿಡ್ ಲಾ ಲಿಗಾದಲ್ಲಿ ಮೂರನೆ ಸ್ಥಾನದಲ್ಲಿದೆ.