ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ: 323 ಎಸೆತಗಳಲ್ಲಿ 1,009 ರನ್
Update: 2016-01-05 23:42 IST
117 ವರ್ಷಗಳ ದಾಖಲೆ ಮುರಿದ ಮುಂಬೈನ ಪೋರ
ಮುಂಬೈ, ಜ.5: ಕಲ್ಯಾಣ್‌ನ 15ರ ಹರೆಯದ ಶಾಲಾ ಬಾಲಕ ಪ್ರಣವ್ ಧನವಾಡೆ ಅವರು ಭಂಡಾರಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಔಟಾಗದೆ 1,009 ರನ್ ದಾಖಲಿಸುವ ಮೂಲಕ 117 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ.
ಕೆ.ಸಿ. ಗಾಂಧಿ ಸ್ಕೂಲ್ ತಂಡದ ಆಟಗಾರ ಪಿ.ಧನವಾಡೆ ಅವರು ಆರ್ಯ ಗುರುಕುಲ ಸ್ಕೂಲ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಪ್ರಣವ್ ನಾಲ್ಕಂಕೆಯ ಸ್ಕೋರ್ ದಾಖಲಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.