×
Ad

ತೆಂಡುಲ್ಕರ್ ಅನುಸರಿಸಲು ಬ್ಯಾಟಿಂಗ್ ಶೈಲಿ ಬದಲಿಸಿದ್ದೆ: ಸೆಹ್ವಾಗ್

Update: 2016-01-06 23:48 IST

ಹೊಸದಿಲ್ಲಿ, ಜ.6: ‘‘ತಾನು ವೃತ್ತಿಜೀವನದ ಆರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ 10 ರಿಂದ 12 ಓವರ್ ಬ್ಯಾಟಿಂಗ್ ಮಾಡಲು ಅವಕಾಶ ಲಭಿಸಿತ್ತು. ಕಡಿಮೆ ಎಸೆತಗಳಲ್ಲಿ ಗರಿಷ್ಠ ಸ್ಕೋರ್ ಗಳಿಸಲು ಯತ್ನಿಸುತ್ತಿದ್ದೆ. ತಾನು ಇದೇ ರೀತಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿದ್ದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಬ್ಯಾಟಿಂಗ್‌ಗೆ ಅಭಿಮಾನಿಗಳಿಂದ ಶ್ಲಾಘನೆ ಲಭಿಸಿತ್ತು’’ ಎಂದು ಭಾರತದ ಮಾಜಿ ಸ್ಫೋಟಕ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

‘‘ಟೀಮ್ ಇಂಡಿಯಾವನ್ನು ಸೇರಿದ ನಂತರ ಸಚಿನ್ ತೆಂಡುಲ್ಕರ್‌ರಂತೆ ಬ್ಯಾಟಿಂಗ್ ಮಾಡಲು ಯತ್ನಿಸಿದ್ದೆ. ತನ್ನ ಬ್ಯಾಟಿಂಗ್ ಶೈಲಿ ಬದಲಿಸಲು ಪ್ರಯತ್ನಪಟ್ಟಿದ್ದೆ. ತಾನು ತನ್ನದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ’’ಎಂದು ಸೆಹ್ವಾಗ್ ನುಡಿದರು.

 ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಕಳಂಕಿತಗೊಂಡಿರುವ ಐಪಿಎಲ್ ಕುರಿತು ಪ್ರತಿಕ್ರಿಯಿಸಿದ ಸೆಹ್ವಾಗ್, ತನ್ನ ಪ್ರಕಾರ, ಐಪಿಎಲ್ ಯುವ ಆಟಗಾರರಿಗೆ ಒಂದು ವೇದಿಕೆ. 2000-01ರಲ್ಲಿ ತಾನು 20 ಪಂದ್ಯಗಳನ್ನು ಆಡಿದ ನಂತರ ಟೀಮ್ ಇಂಡಿಯಾಕ್ಕೆ ಪ್ರವೇಶಿಸಿದ್ದೆ. ಶಿಖರ್ ಧವನ್‌ರಂತಹ ಆಟಗಾರರು ಐಪಿಎಲ್ ಪ್ರದರ್ಶನದ ಮೂಲಕವೇ ಭಾರತ ತಂಡವನ್ನು ಪ್ರವೇಶಿಸಿದ್ದಾರೆ. ಕೆಎಲ್ ರಾಹುಲ್ ಆಸ್ಟ್ರೇಲಿಯದಲ್ಲಿ ಆಡಿದ ಎರಡನೆ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದರು. ಇವೆೆಲ್ಲವೂ ಐಪಿಎಲ್‌ನ ಪರಿಣಾಮವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News