×
Ad

ಚೆನ್ನೈ ಓಪನ್: ಸ್ಟಾನಿಸ್ಲಾಸ್,ರಾಮ್‌ಕುಮಾರ್ ಕ್ವಾರ್ಟರ್ ಫೈನಲ್‌ಗೆ

Update: 2016-01-07 23:51 IST

ಚೆನ್ನೈ, ಜ.7: ಸ್ವಿಸ್‌ನ ಅಗ್ರ ಶ್ರೇಯಾಂಕದ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕ, ಭಾರತದ ವೈಲ್ಡ್‌ಕಾರ್ಡ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ವಾವ್ರಿಂಕ ಅವರು ರಶ್ಯದ ಯುವ ಆಟಗಾರ ಆ್ಯಂಡ್ರೂ ರುಬ್ಲೇವ್‌ರನ್ನು 6-3, 6-2 ಸೆಟ್‌ಗಳಿಂದ ಮಣಿಸಿದರು.

ವಾವ್ರಿಂಕ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಐದನೆ ಶ್ರೇಯಾಂಕದ ಗುಲ್ಲೆೆರ್ಮೊ ಗಾರ್ಸಿಯ-ಲೊಪೆಝ್‌ರನ್ನು ಎದುರಿಸಲಿದ್ದಾರೆ. ಲೊಪೆಝ್ ಕ್ರೊವೇಷಿಯದ ಆ್ಯಂಟೆ ಪಾವಿಕ್‌ರನ್ನು 7-6(5), 6-1 ಸೆಟ್‌ಗಳಿಂದ ಮಣಿಸಿದ್ದರು.

 ರಾಮ್‌ಕುಮಾರ್ ಕ್ವಾರ್ಟರ್ ಫೈನಲ್‌ಗೆ :ಲೋಕಲ್ ಹೀರೊ ರಾಮ್‌ಕುಮಾರ್ ರಾಮನಾಥನ್ ಚೆನ್ನೈ ಓಪನ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೈಲ್ಡ್ ಕಾರ್ಡ್ ಆಟಗಾರ ರಾಮ್‌ಕುಮಾರ್ ಅಗ್ರ ರ್ಯಾಂಕಿನ ರಶ್ಯದ ಅಲೆಕ್ಸಾಂಡರ್ ಕುಡ್ರಿಯೊಸೇವಾ ವಿರುದ್ಧ 3-6, 6-4, 6-4 ಸೆಟ್‌ಗಳಿಂದ ಗೆಲುವು ಸಾಧಿಸಿದರು.

ಕಳೆದ 12 ಪಂದ್ಯಗಳಲ್ಲಿ ಅಜೇಯವಾಗುಳಿದಿರುವ ರಾಮ್ ಕುಮಾರ್ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.45ನೆ ಆಟಗಾರ ಅಲ್ಝಾಝ್ ಬೆಡೆನೆ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News