×
Ad

ಆಸ್ಟ್ರೇಲಿಯದಲ್ಲಿ ಕಾಡ್ಗಿಚ್ಚು: 95 ಮನೆಗಳು ಆಹುತಿ

Update: 2016-01-08 23:24 IST

ಪರ್ತ್, ಜ. 8: ಪಶ್ಚಿಮ ಆಸ್ಟ್ರೇಲಿಯ ರಾಜ್ಯದಲ್ಲಿ ಹಬ್ಬಿರುವ ಕಾಡ್ಗಿಚ್ಚು, ಒಂದೇ ಪಟ್ಟಣದಲ್ಲಿ 95 ಮನೆಗಳನ್ನು ಸುಟ್ಟುಹಾಕಿದೆ ಹಾಗೂ ಇನ್ನಷ್ಟು ಪಟ್ಟಣಗಳಿಗೆ ವ್ಯಾಪಿಸುವ ಬೆದರಿಕೆಯನ್ನು ಒಡ್ಡಿದೆ.

ಬುಧವಾರ ಮಿಂಚಿನ ಹೊಡೆತದಿಂದ ಬೆಂಕಿ ಹೊತ್ತಿಕೊಂಡಂದಿನಿಂದ 50,000 ಹೆಕ್ಟೇರ್‌ಗೂ ಅಧಿಕ ಅರಣ್ಯ ಮತ್ತು ಕೃಷಿ ಜಮೀನು ಸುಟ್ಟುಹೋಗಿದೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ ಮತ್ತು ನಾಲ್ವರು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಯತ್ನದಲ್ಲಿ ಗಾಯಗೊಂಡಿದ್ದಾರೆ ಎಂದು ಬೆಂಕಿ ಮತ್ತು ತುರ್ತು ಸೇವೆಗಳ ಕಮಿಶನರ್ ವೇನ್ ಗ್ರೆಗ್ಸನ್ ತಿಳಿಸಿದರು.

ಸ್ಥಳಾಂತರದ ವೇಳೆ ಜನರು ನಾಪತ್ತೆಯಾಗಿದ್ದಾರೆ ಎಂಬುದಾಗಿ ಹೆಚ್ಚಿನ ಸಂದರ್ಭಗಳಲ್ಲಿ ವರದಿಯಾಗುತ್ತದೆ. ಆದರೆ, ಬಳಿಕ ಸಾಮಾನ್ಯವಾಗಿ ನಾಪತ್ತೆಯಾದವರು ಸುರಕ್ಷಿತವಾಗಿ ಮರಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News