×
Ad

ಮೂರನೆ ಟೆಸ್ಟ್‌ಗೆ ಡೇಲ್ ಸ್ಟೇಯ್ನ್

Update: 2016-01-08 23:56 IST

ಜೋಹಾನ್ಸ್‌ಬರ್ಗ್, ಜ.8: ದಕ್ಷಿಣ ಆಫ್ರಿಕದ ವೇಗದ ಬೌಲರ್ ಡೇಲ್ ಸ್ಟೇಯ್ನಿ ಇಂಗ್ಲೆಂಡ್ ವಿರುದ್ಧದ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಫಿಟ್ ಆಗುವ ಸಾಧ್ಯತೆಯಿದೆ.

ಗುರುವಾರದಿಂದ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಮೂರನೆ ಟೆಸ್ಟ್‌ಗೆ ಮೊದಲು ಸ್ಟೇಯ್ನ್ ತನ್ನ ಫಿಟ್‌ನೆಸ್‌ನ್ನು ಸಾಬೀತುಪಡಿಸಬೇಕಾಗಿದೆ.

ನವೆಂಬರ್‌ನಲ್ಲಿ ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ವೇಳೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಇಂಗ್ಲೆಂಡ್ ವಿರುದ್ಧ ಕಳೆದ ತಿಂಗಳು ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಭುಜನೋವು ಕಾಣಿಸಿಕೊಂಡಿತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಹಿನ್ನಡೆಯಲ್ಲಿರುವ ದಕ್ಷಿಣ ಆಫ್ರಿಕ ಸರಣಿಯ ಉಳಿದೆರಡು ಪಂದ್ಯಗಳಿಗೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಹಾಶಿಮ್ ಅಮ್ಲ ಹಠಾತ್ತನೆ ನಾಯಕತ್ವ ತ್ಯಜಿಸಿರುವ ಕಾರಣ ಎಬಿ ಡಿವಿಲಿಯರ್ಸ್ ಇದೇ ಮೊದಲ ಬಾರಿ ಟೆಸ್ಟ್ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ.

ಕೇಪ್‌ಟೌನ್‌ನಲ್ಲಿ ನಡೆದ ಎರಡನೆ ಟೆಸ್ಟ್‌ನಲ್ಲಿ ತಂಡದಿಂದ ಕೈಬಿಡಲ್ಪಟ್ಟಿದ್ದ ಜೆಪಿ ಡುಮಿನಿ ಗುರುವಾರ ದೇಶೀಯ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News