ಸಾನಿಯಾ-ಹಿಂಗಿಸ್ ಫೈನಲ್‌ಗೆ ಲಗ್ಗೆ

Update: 2016-01-08 18:52 GMT

ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿ

 ಬ್ರಿಸ್ಬೇನ್‌ನಲ್ಲಿ ಶುಕ್ರವಾರ ನಡೆದ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಸತತ 25ನೆ ಗೆಲುವು ಸಾಧಿಸಿರುವ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಸಾನಿಯಾ-ಮಾರ್ಟಿನಾ ಈ ವರ್ಷವೂ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಇಂಡೋ-ಸ್ವಿಸ್ ಜೋಡಿ ಸಾನಿಯಾ ಹಾಗೂ ಮಾರ್ಟಿನಾ, ಸ್ಲೋವಾಕಿಯ-ರಶ್ಯದ ಜೋಡಿ ಆ್ಯಂಡ್ರೆಜಾ ಕ್ಲೆಪಕ್ ಹಾಗೂ ಅಲಾ ಕುಡ್ರಯಸೋವಾ ವಿರುದ್ಧ 6-3, 7-5 ಸೆಟ್‌ಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾದರು.

 ವಿಶ್ವದ ನಂ.1 ಡಬಲ್ಸ್ ಜೋಡಿ ಸಾನಿಯಾ ಹಾಗೂ ಹಿಂಗಿಸ್ ಎದುರಾಳಿ ಆಟಗಾರ್ತಿಯರನ್ನು ಎರಡೂ ಸೆಟ್‌ನಲ್ಲಿ ಸುಲಭವಾಗಿ ಮಣಿಸಿದರು. ಸಾನಿಯಾ-ಹಿಂಗಿಸ್ ಕಳೆದ ಋತುವಿನಲ್ಲಿ ಐದು ಪ್ರಶಸ್ತಿಗಳನ್ನು ಜಯಿಸಿದ್ದು, ಅಜೇಯ ಗೆಲುವಿನ ಓಟವನ್ನು 25ಕ್ಕೆ ವಿಸ್ತರಿಸಿದರು. ಈ ಮೊದಲು 2012ರಲ್ಲಿ ಇಟಲಿಯ ಸಾರಾ ಇರ್ರಾನಿ ಹಾಗೂ ರಾಬರ್ಟ್ ವಿನ್ಸಿ ಸತತ 25 ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿತ್ತು.

ಇಟಲಿಯ ಜೋಡಿ ಸಾರಾ ಹಾಗೂ ವಿನ್ಸಿ ಬಾರ್ಸಿಲೋನ, ಮ್ಯಾಡ್ರಿಡ್, ರೋಮ್, ಫ್ರೆಂಚ್ ಓಪನ್‌ನಲ್ಲಿ ಸತತ ಪ್ರಶಸ್ತಿಗಳನ್ನು ಜಯಿಸಿದ್ದರು. ವಿಂಬಲ್ಡನ್ ಓಪನ್‌ನಲ್ಲಿ ಈ ಜೋಡಿಯ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿತ್ತು.

 ‘‘ನನ್ನ ಪ್ರಕಾರ, ನಾವಿಬ್ಬರೂ ಹೊಸ ಋತುವಿನಲ್ಲಿ ಉತ್ತಮ ಆರಂಭ ಪಡೆದಿದ್ದೇವೆ. 2015ರಂತೆ ಈ ವರ್ಷವೂ ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸವಿದೆ. ಇದೀಗ ಮತ್ತೊಮ್ಮೆ ಫೈನಲ್‌ಗೆ ತಲುಪಿರುವ ನಾವು ಪ್ರಶಸ್ತಿ ಜಯಿಸುವತ್ತ ಚಿತ್ತವಿರಿಸಿದ್ದೇವೆ’’ ಎಂದು ಮಾರ್ಟಿನಾ ಹಿಂಗಿಸ್ ಪ್ರತಿಕ್ರಿಯಿಸಿದ್ದಾರೆ.

ಫೆಡರರ್ ಸೆಮಿಫೈನಲ್‌ಗೆ ಬ್ರಿ

ಸ್ಬೇನ್, ಜ.8: ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರೋಜರ್ ಫೆಡರರ್ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫೆಡರರ್ ಅವರು ಗ್ರಿಗೊರ್ ಡಿಮಿಟ್ರೊವ್ ವಿರುದ್ಧ 6-4, 6-7(4-7), 6-4 ಸೆಟ್‌ಗಳಿಂದ ಪ್ರಯಾಸದ ಗೆಲುವು ಸಾಧಿಸಿದರು.

ಫೆಡರರ್ ಸೆಮಿಫೈನಲ್‌ನಲ್ಲಿ ಆಸ್ಟ್ರೀಯದ ಡೊಮಿನಿಕ್ ಥಿಯೆಮ್‌ರನ್ನು ಎದುರಿಸಲಿದ್ದಾರೆ. ಡೊಮಿನಿಕ್ ಕ್ರೊವೇಷಿಯದ 3ನೆ ಶ್ರೇಯಾಂಕದ ಮರಿನ್ ಸಿಲಿಕ್‌ರನ್ನು 2-6, 7-6(7/4), 6-4 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದರು.

ನಿಶಿಕೊರಿಗೆ ಟಾಮಿಕ್ ಶಾಕ್

ಬ್ರಿಸ್ಬೇನ್, ಜ.8: ಇಲ್ಲಿ ನಡೆಯುತ್ತಿರುವ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಬೆರ್ನಾರ್ಡ್ ಟಾಮಿಕ್ ಅವರು ಕೀ ನಿಶಿಕೊರಿಗೆ ಆಘಾತ ನೀಡಿ ಸೆಮಿಫೈನಲ್‌ತಲುಪಿದ್ದಾರೆ.

ಟಾಮಿಕ್ ಅವರು ನಿಶಿಕೋರಿ ವಿರುದ್ಧ ಇಂದು ನಡೆದ ಕಾರ್ಟರ್ ಫೈನಲ್ ಪಂದ್ಯದಲ್ಲಿ 6-3, 1-6, 6-3 ಅಂತರದಲ್ಲಿ ಜಯ ಗಳಿಸಿ ಸೆಮಿಪೈನಲ್ ತಲುಪಿದರು.

 ಸೆಮಿಪೈನಲ್‌ನಲ್ಲಿ ಟಾಮಿಕ್ ಅವರು ರಾವೊನಿಕ್‌ರನ್ನು ಎದುರಿಸಲಿದ್ದಾರೆ.

ರಾವೊನಿಕ್ ಕಳೆದ ಆವೃತ್ತಿಯ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ಸೋಲು ಅನುಭವಿಸಿ ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News