×
Ad

ಚೆನ್ನೈ ಓಪನ್: ವಾವ್ರಿಂಕ ಫೈನಲ್‌ಗೆ

Update: 2016-01-09 23:32 IST

ಚೆನ್ನೈ, ಜ.9: ಅಗ್ರ ಶ್ರೇಯಾಂಕದ ಹಾಗೂ ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಸ್ವಿಸ್ ಆಟಗಾರ ವಾವ್ರಿಂಕ ಫ್ರೆಂಚ್‌ನ ಮೂರನೆ ಶ್ರೇಯಾಂಕದ ಬೆನಾಯ್ಟೆ ಪೈರ್‌ರನ್ನು 6-3, 6-4 ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾದರು. ಇದರೊಂದಿಗೆ ಸತತ ಮೂರನೆ ಬಾರಿ ಚೆನ್ನೈ ಓಪನ್ ಪ್ರಶಸ್ತಿ ಜಯಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ವಾವ್ರಿಂಕ ಅವರು ಪೈರ್ ವಿರುದ್ಧ ಆಡಿರುವ 7 ಪಂದ್ಯಗಳ ಪೈಕಿ ಆರನೆ ಗೆಲುವು ದಾಖಲಿಸಿದರು. ಸತತ ಮೂರನೆ ಗೆಲುವು ಇದಾಗಿದೆ. 2013ರಲ್ಲಿ ಕೆನಡಾದಲ್ಲಿ ಪೈರ್ ಅವರು ವಿಶ್ವದ ನಂ.4ನೆ ಆಟಗಾರ ವಾವ್ರಿಂಕರನ್ನು ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News