×
Ad

ಮುಶ್ತಾಕ್ ಅಲಿ ಟ್ರೋಫಿ: ಜಾರ್ಖಂಡ್, ವಿದರ್ಭ ಕ್ವಾ. ಫೈನಲ್‌ಗೆ

Update: 2016-01-10 23:15 IST

 ವಡೋದರ, ಜ.10: ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ರವಿವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ತಮಿಳುನಾಡು ಹಾಗೂ ಸೌರಾಷ್ಟ್ರ ಗೆಲುವಿನೊಂದಿಗೆ ಟೂರ್ನಿಯಿಂದ ಹೊರ ನಡೆದವು. ಜಾರ್ಖಂಡ್ ಹಾಗೂ ವಿದರ್ಭ ತಂಡಗಳು ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದವು.

‘ಎ’ ಗುಂಪಿನ ಪಂದ್ಯದಲ್ಲಿ ತಮಿಳುನಾಡು ತಂಡ ಹೈದರಾಬಾದ್‌ನ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿದರೂ ನಾಕೌಟ್ ಹಂತಕ್ಕೇರಲು ವಿಫಲವಾಯಿತು. ಪಂಜಾಬ್ ತಂಡ ಸೌರಾಷ್ಟ್ರದ ವಿರುದ್ಧ ಸೋಲುಂಡಿತು.

ಈ ಎರಡು ತಂಡಗಳು ಟೂರ್ನಿಯಿಂದ ಹೊರ ನಡೆದವು. ಕೇರಳವನ್ನು 6 ವಿಕೆಟ್‌ಗಳಿಂದ ಮಣಿಸಿದ ಜಾರ್ಖಂಡ್ ತಂಡ ನಾಕೌಟ್‌ಗೆ ಅರ್ಹತೆ ಪಡೆಯಿತು. ಅಸ್ಸಾಂ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಮಧ್ಯಪ್ರದೇಶ ತಂಡ 6 ಪಂದ್ಯಗಳಲ್ಲಿ ನಾಲ್ಕನೆ ಗೆಲುವು ದಾಖಲಿಸಿತು.

ಹಿಮಾಚಲ ಪ್ರದೇಶದ ವಿರುದ್ಧ 27 ರನ್‌ಗಳ ಸುಲಭ ಜಯ ಸಾಧಿಸಿದ ವಿದರ್ಭ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News