×
Ad

ಸಾನಿಯಾ-ಮಾರ್ಟಿನಾ ಕ್ವಾರ್ಟರ್ ಫೈನಲ್‌ಗೆ

Update: 2016-01-12 23:30 IST

ಸಿಡ್ನಿ ಇಂಟರ್‌ನ್ಯಾಶನಲ್ ಟೂರ್ನಿ: 

ಸಿಡ್ನಿ, ಜ.12: ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸುಲಭ ಜಯ ಸಾಧಿಸಿರುವ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಸಾನಿಯಾಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಅನಸ್ತೇಸಿಯ ರಾಡಿಯೊನೊವಾ ಹಾಗೂ ಅರಿನಾ ರಾಡಿಯೊನೊವಾರನ್ನು 6-2, 6-3 ಸೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ತಲುಪಿದರು.

 ಸಾನಿಯಾ ಹಾಗೂ ಹಿಂಗಿಸ್‌ಗೆ ಇದು ಸತತ 27ನೆ ಗೆಲುವಾಗಿದೆ. ಇದು ಟೆನಿಸ್‌ನ ಡಬಲ್ಸ್ ಪಂದ್ಯದಲ್ಲಿ ದಾಖಲಾದ ದೀರ್ಘ ಗೆಲುವಾಗಿದೆ. 2012ರಲ್ಲಿ ಇಟಲಿಯ ಸಾರಾ ಇರ್ರಾನಿ ಹಾಗೂ ರಾಬರ್ಟ ವಿನ್ಸಿ ಸತತ 25 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು.

ಸಾನಿಯಾ ಹಾಗೂ ಮಾರ್ಟಿನಾ ಕಳೆದ ವಾರ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಸತತ ಆರನೆ ಪ್ರಶಸ್ತಿಯನ್ನು ಜಯಿಸುವ ಮೂಲಕ 2016ರ ಋತುವನ್ನು ಗೆಲುವಿನೊಂದಿಗೆ ಆರಂಭಿಸಿದ್ದರು.

ರೋಹನ್ ಬೋಪಣ್ಣ ಅವರು ರೊಮಾನಿಯದ ಫ್ಲಾರಿನ್ ಮೆರ್ಗಿಯ ಜೊತೆಗೂಡಿ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಈ ಜೋಡಿ ಡೆನಿಸ್ ಇಸ್ಟೊಮಿನ್ ಹಾಗೂ ಹೆನ್ರಿ ಕಾಂಟಿನೆನ್‌ರನ್ನು 6-7, 6-3, 10-8 ಸೆಟ್‌ಗಳ ಅಂತರದಿಂದ ಮಣಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News