×
Ad

ಪೇಸ್ ಜೋಡಿಗೆ ಸೋಲು

Update: 2016-01-12 23:40 IST

ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿ

ಸಿಡ್ನಿ, ಜ.12: ಭಾರತದ ಟೆನಿಸ್ ಸ್ಟಾರ್ ಲಿಯಾಂಡರ್ ಪೇಸ್ ಹಾಗೂ ಫ್ರೆಂಚ್‌ನ ಜೆರೆಮಿ ಚಾರ್ಡಿ ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಎಡವಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಪುರುಷರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಪೇಸ್-ಚಾರ್ಡಿ ಜೋಡಿ ಬ್ರೆಝಿಲ್-ಕೆನಡಾದ ಜೋಡಿ ಮಾರ್ಸೆಲೊ ಮೆಲೊ ಹಾಗೂ ಡೇನಿಯಲ್ ನೆಸ್ಟರ್ ವಿರುದ್ಧ 4-6, 4-6 ಸೆಟ್‌ಗಳಿಂದ ಸೋತಿದ್ದಾರೆ.

ಮುಂದಿನ ವಾರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಮಾರ್ಟಿನಾ ಹಿಂಗಿಸ್‌ರೊಂದಿಗೆ ಆಡಲಿರುವ ಹಾಲಿ ಚಾಂಪಿಯನ್ ಪೇಸ್‌ಗೆ ಈ ಸೋಲು ಹಿನ್ನಡೆಯಾಗಿ ಪರಿಣಮಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News