ಭಾರತ ವಿರುದ್ಧ ಎರಡನೆ ಏಕದಿನ: ಆಸೀಸ್ ತಂಡಕ್ಕೆ ಹೇಸ್ಟಿಂಗ್ಸ್
Update: 2016-01-12 23:42 IST
ಬ್ರಿಸ್ಬೇನ್, ಜ.12: ಬ್ರಿಸ್ಬೇನ್‌ನಲ್ಲಿ ಗುರುವಾರ ನಡೆಯಲಿರುವ ಭಾರತ ವಿರುದ್ಧದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ವೇಗದ ಬೌಲರ್ ಜಾನ್ ಹೇಸ್ಟಿಂಗ್ಸ್ ಆಸ್ಟ್ರೇಲಿಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಮಂಗಳವಾರ ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಬದಲಿ ಆಟಗಾರನಾಗಿ ಹೇಸ್ಟಿಂಗ್ಸ್ ಆಯ್ಕೆಯಾಗಿದ್ದಾರೆ.
‘‘ಮಾರ್ಷ್ ಆಸ್ಟ್ರೇಲಿಯ ತಂಡದ ಪ್ರಮುಖ ಆಟಗಾರನಾಗಿದ್ದು, ಮುಂಬರುವ ಬಿಡುವಿಲ್ಲದ ಕ್ರಿಕೆಟ್‌ನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಲಾಗಿದೆ’’ ಎಂದು ಮುಖ್ಯ ಆಯ್ಕೆಗಾರ ರಾಡ್ ಮಾರ್ಷ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.