×
Ad

ನ್ಯೂಝಿಲೆಂಡ್ ವಿರುದ್ಧ ಟ್ವೆಂಟಿ-20ಗೆ ಉಮರ್ ಅಕ್ಮಲ್ ಲಭ್ಯ

Update: 2016-01-13 19:54 IST

ಇಸ್ಲಾಮಾಬಾದ್, ಜ.13: ಪಾಕಿಸ್ತಾನದ ಮಧ್ಯಮ ಕ್ರಮಾಂಕದ ದಾಂಡಿಗ ಉಮರ್ ಅಕ್ಮಲ್ ನ್ಯೂಝಿಲೆಂಡ್ ವಿರುದ್ಧ ಶುಕ್ರವಾರ ಆರಂಭವಾಗಲಿರುವ ಟ್ವೆಂಟಿ-20 ಸರಣಿಯಲ್ಲಿ ಆಡಲು ಅರ್ಹತೆ ಪಡೆದಿದ್ದಾರೆ.

ದೇಶೀಯ ಪಂದ್ಯದ ವೇಳೆ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ್ದ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಕ್ಮಲ್‌ಗೆ ಒಂದು ಪಂದ್ಯದಿಂದ ನಿಷೇಧ ಹೇರಿತ್ತು. ನಿಷೇಧದ ವಿರುದ್ಧ ಅಕ್ಮಲ್ ಪಿಸಿಬಿಗೆ ಮೇಲ್ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನಿಷೇಧವನ್ನು ಹಿಂಪಡೆಯಲಾಗಿದೆ. ಅಕ್ಮಲ್‌ಗೆ ವಿಧಿಸಿರುವ ನಿಷೇಧವನ್ನು ಹಿಂದಕ್ಕೆ ಪಡೆಯಲಾಗಿದೆ. ಅವರಿಗೆ ನ್ಯೂಝಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಆಡಲು ಅನುಮತಿ ನೀಡಲಾಗಿದೆ ೆಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬುಧವಾರ ಹೇಳಿದೆ.

ಅಕ್ಮಲ್ ಕಳೆದ ವಾರ ನಡೆದ ದೇಶೀಯ ಟೂರ್ನಿಯ ಫೈನಲ್‌ನಲ್ಲಿ ತಾನು ಧರಿಸಿದ್ದ ಸಮವಸ್ತ್ರದಲ್ಲಿ ಒಂದು ಲಾಂಛನದ ಬದಲಿಗೆ ಎರಡು ಲಾಂಛನವನ್ನು ಧರಿಸಿದ್ದರು.

ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಆಡಿದ ಬಳಿಕ ಅಕ್ಮಲ್ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಏಕದಿನ ಸರಣಿಯಲ್ಲಿ ಅಕ್ಮಲ್ ಆಡುವುದಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News