×
Ad

ಸಾನಿಯಾ- ಮಾರ್ಟಿನಾ ವಿಶ್ವದಾಖಲೆ ; ಸತತ 29 ಪಂದ್ಯಗಳಲ್ಲಿ ಜಯ* ಸಿಡ್ನಿ ಓಪನ್‌ನಲ್ಲಿ ಫೈನಲ್‌ಗೆ ಲಗ್ಗೆ

Update: 2016-01-14 17:20 IST

ಸಿಡ್ನಿ, ಜ.14: ಭಾರತದ ಅಗ್ರ ಶ್ರೇಯಾಂಕದ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಝಾ ಮತ್ತು ಸ್ವಿಸ್ ತಾರೆ ಮಾರ್ಟಿನಾ ಹಿಂಗಿಸ್ ಗುರುವಾರ ಡಬ್ಲುಟಿಎ ಸಿಡ್ನಿ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ನ ಫೈನಲ್ ಪ್ರವೇಶಿದ್ದಾರೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ಸಾನಿಯಾ ಮತ್ತು ಮಾರ್ಟಿನಾ ಅವರು ರುಮೇನಿಯಾದ ಇಯಾನಾ ರಲುಕಾ ಒಲಾರು ಮತ್ತು ಕಝಕಿಸ್ತಾನದ ಯರಸ್ಲೋವಾ ಶ್ವಡೋವಾ ವಿರುದ್ಧ 4-3, 6-3, 10-8 ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತು ತಲುಪಿದರು.
    ಇದರೊಂದಿಗೆ ಸತತ 29 ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.ಸಾನಿಯಾ ಮತ್ತು ಮಾರ್ಟಿನಾ ಅವರು ಬೆಲಾರಸ್‌ನ ನತಾಶಾ ಝ್ವೆರೆವಾ ಮತ್ತು ಪೋರ್ಟೊ ರಿಕೊದ ಗೀಗಿ ಫೆರ್ನಾಂಡೆಝ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇವರು 1994ರಲ್ಲಿ ಸತತ 28 ಪ್ರಶಸ್ತಿಗಳನ್ನು ಜಯಿಸಿ ದಾಖಲೆ ನಿರ್ಮಿಸಿದ್ದರು.
ವಿಶ್ವದ ನಂ.1 ಡಬಲ್ಸ್ ಜೋಡಿ ಸಾನಿಯಾ ಮತ್ತು ಮಾರ್ಟಿನಾ ಇನ್ನೊಂದು ಪ್ರಶಸ್ತಿ ಗೆಲ್ಲುವ ತಯಾರಿ ನಡೆಸಿದ್ದಾರೆ.
ಸೆಮಿಫೈನಲ್ ಪಂದ್ಯ ಒಂದು ಗಂಟೆ 31 ನಿಮಿಷಗಳ ಕಾಲ ನಡೆಯಿತು. ಮೊದಲ ಸೆಟ್‌ನಲ್ಲಿ ಸಾನಿಯಾ ಮತ್ತು ಮಾರ್ಟಿನಾ ಹಿನ್ನಡೆ ಅನುಭವಿಸಿದ್ದರೂ, ಬಳಿಕ ಚೇತರಿಸಿಕೊಂಡು ಎದುರಾಳಿ ಆಟಗಾರ್ತಿಯರನ್ನು ಸೋಲಿಸಿದರು.
  ಸಾನಿಯಾ ಮತ್ತು ಮಾರ್ಟಿನಾ 2015ರಲ್ಲಿ ಜೊತೆಯಾಗಿ ವಿಂಬಲ್ಡನ್, ಯುಎಸ್ ಓಪನ್ ಸೆರಿದಂತೆ 9 ಪ್ರಶಸ್ತಿಗಳನ್ನು ಜಯಿಸಿದ್ದರು. ಅದೇ ಪ್ರದರ್ಶನವನ್ನು 2016ರಲ್ಲಿ ಮುಂದುವರಿಸಿದ್ದಾರೆ.
   ಸಾನಿಯಾ ಮತ್ತು ಮಾರ್ಟಿನಾ ಜೊತೆಯಾಗಿ ಈ ತನಕ 10 ಪ್ರಶಸ್ತಿ ಜಯಿಸಿದ್ದರು. ಇದೀಗ 11ನೆ ಪ್ರಶಸ್ತಿ ಹಾಗೂ ಈ ವರ್ಷದ ಎರಡನೆ ಪ್ರಶಸ್ತಿ ಗೆಲ್ಲುವ ಕಡೆಗೆ ಹೆಜ್ಜೆ ಇರಿಸಿದ್ದಾರೆ. ಇವರು ಕಳೆದ ವಾರ ಬ್ರಿಸ್ಬೇನ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News