×
Ad

ಮೂರನೆ ಟೆಸ್ಟ್: ದಕ್ಷಿಣ ಆಫ್ರಿಕದ ಸಾಧಾರಣ ಮೊತ್ತ; 267/7

Update: 2016-01-15 00:17 IST

ಜೋಹಾನ್ಸ್‌ಬರ್ಗ್, ಜ.14: ಇಲ್ಲಿ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಇಂದು ಆರಂಭಗೊಂಡಿರುವ ಮೂರನೆ ಕ್ರಿಕೆಟ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಸಾಧಾರಣ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕ ತಂಡದ ನಾಯಕ ಎಬಿಡಿವಿಲಿಯರ್ಸ್‌ ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿದ್ದರು.
ದಕ್ಷಿಣ ಆಫ್ರಿಕ ತಂಡ 89 ಓವರ್‌ಗಳ ಮುಕ್ತಾಯಕ್ಕೆ 7 ವಿಕೆಟ್ ನಷ್ಟದಲ್ಲಿ 267 ರನ್ ಗಳಿಸಿತ್ತು. ಕ್ರಿಸ್ ಮೋರಿಸ್ 26ರನ್ ಮತ್ತು ರಬಾಡ 20 ರನ್ ಗಳಿಸಿ ಕ್ರೀಸ್‌ನಲ್ಲಿ ಆಡುತ್ತಿದ್ದರು.
   ದಕ್ಷಿಣ ಆಫ್ರಿಕ ತಂಡಕ್ಕೆ ಡೀನ್ ಎಲ್ಗರ್ ಮತ್ತು ಸ್ಟಿಯಾನ್ ವ್ಯಾನ್ ಝಿಲ್ ಮೊದಲ ವಿಕೆಟ್‌ಗೆ 44 ರನ್‌ಗಳನ್ನು ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು.ಆದರೆ ಬಳಿಕ ಇಂಗ್ಲೆಂಡ್‌ನ ಸ್ಟೀವನ್ ಫಿನ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್ ಸಂಘಟಿತ ದಾಳಿಗೆ ಸಿಲುಕಿ ದಕ್ಷಿಣ ಆಫ್ರಿಕದ ಆಟಗಾರರು ಬೇಗನೆ ವಿಕೆಟ್‌ಗಳನ್ನು ಕೈ ಚೆಲ್ಲಿದರು.
ಇಂಗ್ಲೆಂಡ್‌ನ ವಿಕೆಟ್ ಕೀಪರ ಬೈರ್‌ಸ್ಟೋವ್ ಸತತ ನಾಲ್ಕು ಕ್ಯಾಚ್ ತೆಗೆದುಕೊಳ್ಳುವ ಮೂಲಕ ಮಿಂಚಿದರು. 17.3 ಓವರ್‌ಗಳಲ್ಲಿ 44 ರನ್ ಗಳಿಸುವಷ್ಟರಲ್ಲಿ ಆಫ್ರಿಕದ ಆರಂಭಿಕ ದಾಂಡಿಗ ವ್ಯಾನ್ ಝಿಲ್‌ಗೆ ಸ್ಟೋಕ್ಸ್ ಪೆವಿಲಿಯನ್ ಹಾದಿ ತೋರಿಸಿದರು.

ಝಿಲ್ 21 ರನ್ ಗಳಿಸಿದರು. ಲಂಚ್ ವೇಳೆಗೆ ಆಫ್ರಿಕ 27 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 73 ರನ್ ಗಳಿಸಿತ್ತು. ಎಲ್ಗರ್ ಮತ್ತು ಅಮ್ಲ ಎರಡನೆ ವಿಕೆಟ್‌ಗೆ 73 ರನ್ ಸೇರಿಸಿದರು. ಎಲ್ಗರ್ 46 ರನ್ ಗಳಿಸಿ ಅಲಿಗೆ ವಿಕೆಟ್ ಒಪ್ಪಿಸಿದರು. ನಾಯಕತ್ವದ ಹೊರೆ ಕಳಚಿಕೊಂಡಿರುವ ಅಮ್ಲ 40 ರನ್, ನೂತನ ನಾಯಕ ಎಬಿಡಿವಿಲಿಯರ್ಸ್‌ 36 ರನ್, ಎಫ್‌ಡು ಪ್ಲೆಸಿಸ್ 16 ರನ್, ಬವುಮಾ 23 ರನ್, ವಿಲಾಸ್ 26 ರನ್ ಗಳಿಸಿ ಔಟಾಗಿದ್ದಾರೆ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ 89 ಓವರ್‌ಗಳಲ್ಲಿ 267 /7(ಎಲ್ಗರ್ 46,ಅಮ್ಲ 40,ಎಬಿಡಿವಿಲಿಯರ್ಸ್‌ 36;ಫಿನ್ 2-50, ಸ್ಟೋಕ್ಸ್ 2-53 ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News