ಅಂಡರ್-19 ಕ್ರಿಕೆಟ್ ವಿಶ್ವಕಪ್: ಶಂಸುದ್ದೀನ್ ಅಂಪೈರ್ ಆಗಿ ಆಯ್ಕೆ
Update: 2016-01-16 00:02 IST
ದುಬೈ, ಜ.15: ಮುಂಬರುವ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನ ಮೊದಲ ಪಂದ್ಯಕ್ಕೆ ಭಾರತದ ಸಿ. ಶಂಶುದ್ದೀನ್ ಅವರು ಅಂಪೈರ್ ಆಗಿ ಆಯ್ಕೆಯಾಗಿದ್ದಾರೆ.
ಜ.27ರಿಂದ ಫೆ.14 ರ ತನಕ ಬಾಂಗ್ಲಾದೇಶದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಶಂಸುದ್ದೀನ್ ಜ.27 ರಂದು ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕ ತಂಡ ಹಾಗೂ ಆತಿಥೇಯ ಬಾಂಗ್ಲಾದೇಶ ನಡುವೆ ಚಿತ್ತಗಾಂಗ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಟಿಮ್ ರಾಬಿನ್‌ಸನ್ ಅವರು ಶಂಸುದ್ದೀನ್‌ರೊಂದಿಗೆ ಕಾರ್ಯನಿರ್ವಹಿಸಲಿರುವ ಇನ್ನೋರ್ವ ಅಂಪೈರ್ ಆಗಿದ್ದಾರೆ. ಫಿಲಿಪ್ ಜೋನ್ಸ್ ಟಿವಿ ಅಂಪೈರ್ ಆಗಿದ್ದಾರೆ. ಕಾರ್ಯನಿರ್ವಹಿಸಲಿರುವ ಅಧಿಕಾರಿಗಳ ಪಟ್ಟಿಯನ್ನು ಐಸಿಸಿ ಶುಕ್ರವಾರ ಬಿಡುಗಡೆ ಮಾಡಿದೆ.