ವೆಲ್ಲಿಂಗ್ಟನ್ : ಮ್ಯಾಚ್ ಫಿಕ್ಸಿಂಗ್ ಪ್ರಕರಣ ಮಾನನಷ್ಟ ಮೊಕದ್ದಮೆಯನ್ನುಹಿಂದಕ್ಕೆ ಪಡೆದ ಲಲಿತ್ ಮೋದಿ

Update: 2016-01-16 12:39 GMT

ವೆಲ್ಲಿಂಗ್ಟನ್, ಜ.16: ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ನ್ಯೂಝಿಲೆಂಡ್‌ನ ಮಾಜಿ ಆಲ್‌ರೌಂಡರ್ ಕ್ರಿಸ್ ಕೈರ್ನ್ಸ್ ವಿರುದ್ಧ ಹೂಡಿದ್ದ 3.3 ಮಿಲಿಯನ್ ಪೌಂಡ್ ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ಐಪಿಎಲ್‌ನ ಮಾಜಿ ಆಯುಕ್ತ ಲಲಿತ್ ಮೋದಿ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದಾರೆ. ಕಳೆದ ವರ್ಷ ಲಂಡನ್‌ನಲ್ಲಿ ವಂಚನೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಕೈರ್ನ್ಸ್ ಈಗ ಮತ್ತೊಮ್ಮೆ ನಿರಾಳರಾಗಿದ್ದಾರೆ.

ಮೋದಿ ಅವರು ಮಾನನಷ್ಟ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದು, ಕಾನೂನು ಹೋರಾಟ ಕೊನೆಗೊಳಿಸಲಿದ್ದಾರೆ ಎಂದು ಮೋದಿ ಪರ ವಕೀಲ ರಾಜೇಶ್ 'ನ್ಯೂಝಿಲೆಂಡ್ ಹೆರಾಲ್ಡ್'ಗೆ ತಿಳಿಸಿದ್ದಾರೆ.

ಕೈರ್ನ್ಸ್ ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಇದ್ದ ಕಾರಣ ಅವರನ್ನು ಐಪಿಎಲ್ ಹರಾಜು ಪ್ರಕ್ರಿಯೆಯಿಂದ ದೂರವಿಡಲಾಗಿತ್ತು ಎಂದು 2010ರಲ್ಲಿ ಮೋದಿ ಟ್ವೀಟ್ ಮಾಡಿದ್ದರು. ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿ 2012ರಲ್ಲಿ ಕೈರ್ನ್ಸ್ ವಿರುದ್ಧದ ಕಾನೂನು ಹೋರಾಟದಲ್ಲಿ ಮೋದಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News