×
Ad

ಸಿಡ್ನಿ ಇಂಟರ್‌ನ್ಯಾಶನಲ್ ಟೂರ್ನಿ: ಪ್ರಶಸ್ತಿ ಉಳಿಸಿಕೊಂಡ ವಿಕ್ಟರ್ ಟ್ರಾಯ್ಕಾ

Update: 2016-01-16 23:53 IST

ಸಿಡ್ನಿ, ಜ.16: ಗ್ರಿಗೊರ್ ಡಿಮಿಟ್ರೊವ್ ವಿರುದ್ಧ ರೋಚಕ ಗೆಲುವು ಸಾಧಿಸಿರುವ ವಿಕ್ಟರ್ ಟ್ರಾಯ್ಕಾ ಸಿಡ್ನಿ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಟ್ರಾಯ್ಕಾ ಅವರು ಡಿಮಿಟ್ರೊವ್‌ರನ್ನು 2-6, 6-1, 7-6(7) ಸೆಟ್‌ಗಳಿಂದ ಮಣಿಸಿದ್ದಾರೆ.

29ರ ಹರೆಯದ ಸರ್ಬಿಯದ ಆಟಗಾರ ಟ್ರಾಯ್ಕಾ ಕಳೆದ ವರ್ಷ ಸಿಡ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News