×
Ad

ಬೋಪಣ್ಣ-ಮರ್ಗಿಯಾಗೆ ರನ್ನರ್ಸ್‌-ಅಪ್ ಪ್ರಶಸ್ತಿ

Update: 2016-01-17 00:01 IST

ಎಟಿಪಿ ಸಿಡ್ನಿ ಟೆನಿಸ್ ಟೂರ್ನಿ

ಸಿಡ್ನಿ, ಜ.16: ಎಟಿಪಿ ಸಿಡ್ನಿ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಫ್ಲಾರಿನ್ ಮರ್ಗಿಯಾ ರನ್ನರ್ಸ್‌-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನಾಲ್ಕನೆ ಶ್ರೇಯಾಂಕದ ಇಂಡೋ-ರೋಮಾನಿಯ ಜೋಡಿ ಬೋಪಣ್ಣ ಹಾಗೂ ಮರ್ಗಿಯಾ ಶ್ರೇಯಾಂಕರಹಿತ ಬ್ರೆಝಿಲ್-ಬ್ರಿಟನ್‌ನ ಜೋಡಿ ಬ್ರುನೊ ಸೊರೆಸ್ ಹಾಗೂ ಜಮ್ಮಿ ಮರ್ರೆ ವಿರುದ್ಧ 3-6, 6-7(6) ಸೆಟ್‌ಗಳ ಅಂತರದಿಂದ ಶರಣಾದರು.

ಎರಡನೆ ಸೆಟ್‌ನ ಟ್ರೈ-ಬ್ರೇಕ್‌ನಲ್ಲಿ 4-0 ಅಂತರದಿಂದ ಮುನ್ನಡೆ ಸಾಧಿಸಿದ್ದ ಬೋಪಣ್ಣ ಹಾಗೂ ಮರ್ಗಿಯಾಗೆ ಪಂದ್ಯವನ್ನು ಸೂಪರ್ ಟೈ-ಬ್ರೇಕರ್‌ನತ್ತ ಕೊಂಡೊಯ್ಯುವ ಉತ್ತಮ ಅವಕಾಶವಿತ್ತು. ಆದರೆ,ಎದುರಾಳಿ ಆಟಗಾರರಿಗೆ ಮರಳಿ ಹೋರಾಡಲು ಅವಕಾಶ ನೀಡುವ ಮೂಲಕ ಪಂದ್ಯವನ್ನು ಕೈಚೆಲ್ಲಿದರು.

ಬೋಪಣ್ಣ ಕಳೆದ ವರ್ಷ ಕೆನಡಾದ ಜೊತೆಗಾರ ಡೇನಿಯಲ್ ನೆಸ್ಟರ್ ಅವರೊಂದಿಗೆ ಡಬಲ್ಸ್ ಪಂದ್ಯವನ್ನು ಜಯಿಸಿದ್ದರು. ಈ ವರ್ಷ ಪ್ರಶಸ್ತಿ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ.

ರನ್ನರ್ಸ್‌-ಅಪ್ ಪ್ರಶಸ್ತಿ ಗಳಿಸಿರುವ ಬೋಪಣ್ಣ ಹಾಗೂ ಮರ್ಗಿಯಾ ಸೋಮವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ಗಿಂತ ಮೊದಲು ಉತ್ತಮ ಲಯ ಕಂಡುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News