ಮ್ಯಾಚ್ ಫಿಕ್ಸಿಂಗ್: ತನಿಖೆ ಚುರುಕುಗೊಳಿಸಿದ ದ.ಆಫ್ರಿಕ
Update: 2016-01-17 00:04 IST
ಹೊಸದಿಲ್ಲಿ, ಜ.16: ದಕ್ಷಿಣ ಆಫ್ರಿಕ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಅತ್ಯಂತ ದೊಡ್ಡ ಮ್ಯಾಚ್‌ಫಿಕ್ಸಿಂಗ್ ಹಗರಣದ ವಿರುದ್ಧ ಹೋರಾಡಲು ಸಿದ್ಧತೆ ನಡೆಸುತ್ತಿದೆ. ಸಕ್ರಿಯರಾಗಿರುವ ಇಬ್ಬರು ಮಾಜಿ ಟೆಸ್ಟ್ ಕ್ರಿಕೆಟಿಗರು ಈ ಹಗರಣದಲ್ಲಿ ಭಾಗಿಯಾಗಿದ್ದು, ಈ ಇಬ್ಬರು ತನಿಖೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಕಳಂಕಿತ ಇಬ್ಬರು ಕ್ರಿಕೆಟಿಗರು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಳಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಬಿರುಸಿನಿಂದ ನಡೆಯುತ್ತಿರುವ ತನಿಖೆಯಲ್ಲಿ ಕ್ರಿಕೆಟಿಗರು ಹಾಗೂ ಸಪೋರ್ಟ್ ಸ್ಟಾಫ್ ಸಹಿತ 50ಕ್ಕೂ ಅಧಿಕ ಜನರನ್ನು ಅಧಿಕಾರಿಗಳು ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದಾರೆ. ದಕ್ಷಿಣ ಆಫ್ರಿಕದ ಮಾಜಿ ದಾಂಡಿಗ ಗುಲಾಮ್ ಬೋಡಿ ಮ್ಯಾಚ್ ಫಿಕ್ಸಿಂಗ್‌ನಲ್ಲಿದ್ದಾರೆ ಎಂದು ಇತ್ತೀಚೆಗೆ ದಕ್ಷಿಣ ಆಫ್ರಿಕ ಕ್ರಿಕೆಟ್ ಹೇಳಿತ್ತು