×
Ad

ದಿಲ್ಲಿ ಏಸೆರ್ಸ್‌ ಪಿಬಿಎಲ್ ಚಾಂಪಿಯನ್

Update: 2016-01-18 23:25 IST

ಹೊಸದಿಲ್ಲಿ, ಜ.18: ಮುಂಬೈ ರಾಕೆಟ್ಸ್ ತಂಡವನ್ನು 4-3 ಅಂತರದಿಂದ ರೋಚಕವಾಗಿ ಮಣಿಸಿದ ಆತಿಥೇಯ ದಿಲ್ಲಿ ಏಸೆರ್ಸ್‌ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ(ಪಿಬಿಎಲ್) ಚಾಂಪಿಯನ್ ಟ್ರೋಫಿ ಗೆದ್ದುಕೊಂಡಿದೆ.

ರವಿವಾರ ಇಲ್ಲಿನ ಸಿರಿ ಫೋರ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟ್ರೋಫಿ ಜಯಿಸಿದ ದಿಲ್ಲಿ 3 ಕೋಟಿ ರೂ. ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಟೂರ್ನಿಯ ಅಜೇಯ ದಾಖಲೆ ಕಾಯ್ದುಕೊಂಡ ಸಿಂಗಲ್ಸ್ ಆಟಗಾರ ಟಾಮ್ಮಿ ಸುಗಿಯಾರ್ಟೊ, ಪುರುಷರ ಡಬಲ್ಸ್ ಜೋಡಿ ಕೂ ಕಿಯೆನ್ ಕೀಟ್ ಹಾಗೂ ಟಾನ್ ಬೂನ್ ಹೊಯೊಂಗ್ ಹಾಗೂ ರಾಜೀವ್ ಒಸೆಫ್ ದಿಲ್ಲಿ 4-3 ಅಂತರದಿಂದ ರೋಚಕ ಗೆಲುವು ಸಾಧಿಸಲು ಪ್ರಮುಖ ಕಾಣಿಕೆ ನೀಡಿದರು.

 ಪುರುಷರ ಸಿಂಗಲ್ಸ್‌ನಲ್ಲಿ ಸುಗಿಯಾರ್ಟೊ ಮುಂಬೈನ ಎಚ್‌ಎಸ್ ಪ್ರಣಯ್‌ರನ್ನು 13-15, 15-9, 15-9 ಗೇಮ್‌ಗಳಿಂದ ಮಣಿಸಿದರು. ಪುರುಷರ ಡಬಲ್ಸ್‌ನಲ್ಲಿ ಕೀಟ್ ಹಾಗೂ ಹೊಯೊಂಗ್ ಅವರು ಮುಂಬೈನ ಇವಾನೊವ್ ಹಾಗೂ ಮಥಾಯಿಸ್‌ರನ್ನು 14-15, 15-10, 15-14 ಅಂತರದಿಂದ ಮಣಿಸಿ ದಿಲ್ಲಿಗೆ 2-1 ಮುನ್ನಡೆ ಒದಗಿಸಿಕೊಟ್ಟರು. ನಿರ್ಣಾಯಕ ಪಂದ್ಯದಲ್ಲಿ ರಾಜೀವ್ ಅವರು ಆರ್‌ಎಂವಿ ಗುರುಸಾಯಿದತ್ತ್‌ರನ್ನು 15-11, 15-6 ಅಂತರದಿಂದ ಮಣಿಸಿ ದಿಲ್ಲಿಗೆ ಗೆಲುವು ತಂದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News