ಚೆನ್ನೈ ಓಪನ್ ಮೇಲೆ ಮ್ಯಾಚ್ ಫಿಕ್ಸಿಂಗ್ ಕರಿನೆರಳು?

Update: 2016-01-18 17:56 GMT

ಚೆನ್ನೈ, ಜ.18: ಭಾರತದ ಏಕೈಕ ಎಟಿಪಿ ಟೂರ್ನಮೆಂಟ್ ಚೆನ್ನೈ ಓಪನ್‌ನ ಪಂದ್ಯಗಳನ್ನು ಮ್ಯಾಚ್ ಫಿಕ್ಸಿಂಗ್ ಮಾಡಲು ವೇದಿಕೆಯಾಗಿ ಬಳಸಿಕೊಂಡಿರುವ ಬಲವಾದ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಸಿಎನ್‌ಎನ್-ಐಬಿಎನ್‌ನ ವಿಶೇಷ ವರದಿಯ ಪ್ರಕಾರ, ಚೆನ್ನೈ ಓಪನ್‌ನ ಮೇಲೆ ಇದೀಗ ಟೆನಿಸ್ ವಿಶ್ವವನ್ನು ಬೆಚ್ಚಿಬೀಳಿಸಿರುವ ಮ್ಯಾಚ್ ಫಿಕ್ಸಿಂಗ್‌ನ ಕರಿ ನೆರಳು ಇದೆ.

ಚೆನ್ನೈ ಓಪನ್‌ನಲ್ಲಿ ಕಳೆದ ಒಂದು ದಶಕದಲ್ಲಿ ರಫೆಲ್ ನಡಾಲ್, ಕಾರ್ಲೊಸ್ ಮೊಯಾ, ಪ್ಯಾಟ್ರಿಕ್ ರಾಫ್ಟರ್ ಸೇರಿದಂತೆ ಹಲವು ಅಗ್ರ ಆಟಗಾರರು ಭಾಗವಹಿಸಿದ್ದಾರೆೆ. ಸ್ವಿಸ್‌ನ ಸ್ಟಾನಿಸ್ಲಾಸ್ ವಾವ್ರಿಂಕ ಈ ವರ್ಷ ಹ್ಯಾಟ್ರಿಕ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಟೂರ್ನಿಯ ಯಶಸ್ವಿ ಆಟಗಾರನಾಗಿದ್ದಾರೆ. ಪ್ರಾಯೋಜಕರ ಕೊರತೆ ಕಾರಣ ಈ ವರ್ಷ ಟೂರ್ನಿಯನ್ನು ನಡೆಸಲಾಗುವುದಿಲ್ಲ ಎಂದು ಸಂಘಟಕರು ಹೇಳಿದ್ದರು.

ಆದರೆ, ಮುಖ್ಯ ಆಯೋಜಕರು 2019ರ ತನಕ ಟೂರ್ನಿ ನಡೆಸಲು ನಿರ್ಧರಿಸಿದರು. ಇದೀಗ ಕೇಳಿ ಬಂದಿರುವ ಮ್ಯಾಚ್ ಫಿಕ್ಸಿಂಗ್ ಆರೋಪ ನಿಜವಾದರೆ, ಮುಂಬರುವ ದಿನಗಳಲ್ಲಿ ಚೆನ್ನೈ ಓಪನ್ ನಡೆಯುವುದು ಅನುಮಾನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News