ದ.ಆಫ್ರಿಕದ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸೊಲೆಕಲ್?
Update: 2016-01-19 23:26 IST
ಜೋಹಾನ್ಸ್‌ಬರ್ಗ್, ಜ.19: ದಕ್ಷಿಣ ಆಫ್ರಿಕ ಕ್ರಿಕೆಟ್ ವಲಯದಲ್ಲಿ ಬೆಚ್ಚಿ ಬೀಳಿಸಿರುವ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ದಕ್ಷಿಣ ಆಫ್ರಿಕದ ಮಾಜಿ ಟೆಸ್ಟ್ ವಿಕೆಟ್‌ಕೀಪರ್ ಥಮಿ ಸೊಲೆಕೆಲ್ ತನಿಖೆ ಎದುರಿಸುತ್ತಿರುವ ಓರ್ವ ಆಟಗಾರನಾಗಿದ್ದಾರೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.
12 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕದ ಪರ ಕೊನೆಯ ಬಾರಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿರುವ ಸೊಲೆಕೆಲ್ 2014ರ ಮಾರ್ಚ್ ತನಕ ಆಫ್ರಿಕದ ದೇಶೀಯ ತಂಡದಲ್ಲಿ ಆಡುತ್ತಿದ್ದರು. ಅವರು ಕಳೆದ ವರ್ಷ ನಡೆದ ರ್ಯಾಮ್‌ಸ್ಲಾಮ್ ಟೂರ್ನಿಯಲ್ಲಿ ಫಿಕ್ಸಿಂಗ್ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಆರೋಪ ಸಾಬೀತಾದರೆ ಐದು ವರ್ಷಗಳ ಕಾಲ ನಿಷೇಧ ಎದುರಿಸಲಿದ್ದಾರೆ.