ಲಾರ್ಡ್ಸ್‌ನಲ್ಲಿ ಮೆಕಲಮ್ ವಿಶೇಷ ಉಪನ್ಯಾಸ
ಲಂಡನ್, ಜ.19: ನ್ಯೂಝಿಲೆಂಡ್ ಕ್ರಿಕೆಟ್ ತಂಡದ ನಾಯಕ ಬ್ರೆಂಡನ್ ಮೆಕಲಮ್ ಈ ವರ್ಷದ ಎಂಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಕೌಡ್ರೆ ಉಪನ್ಯಾಸ ನೀಡಲಿದ್ದಾರೆ.
ಮೆಕಲಮ್ ಜೂ.6 ರಂದು ಲಾರ್ಡ್ಸ್‌ನಲ್ಲಿ ಉಪನ್ಯಾಸ ನೀಡಲಿದ್ದು, ಉಪನ್ಯಾಸ ನೀಡುತ್ತಿರುವ ನ್ಯೂಝಿಲೆಂಡ್‌ನ ಎರಡನೆ ಕ್ರಿಕೆಟಿಗನಾಗಿದ್ದಾರೆ. 2006ರಲ್ಲಿ ಮಾರ್ಟಿನ್ ಕ್ರೌವ್ ಈ ಹಿಂದೆ ಉಪನ್ಯಾಸ ನೀಡಿದ್ದರು.
ಫೆಬ್ರವರಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿರುವ ಮೆಕಲಮ್ ಇದೀಗ ಪ್ರತಿಷ್ಠಿತ ಉಪನ್ಯಾಸಕ್ಕೆ ಆಯ್ಕೆಯಾಗಿದ್ದಾರೆ.
ಎಂಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಕೌಡ್ರಿ ಉಪನ್ಯಾಸ ನೀಡಲು ತನಗೆ ಆಹ್ವಾನ ಲಭಿಸಿರುವುದು ದೊಡ್ಡ ಗೌರವ. ನಾನು ಸಂತೋಷದಿಂದ ಆಹ್ವಾನವನ್ನು ಸ್ವೀಕರಿಸಿದ್ದೇನೆ. ಪ್ರಸ್ತುತ ವಿಶ್ವ ಕ್ರಿಕೆಟ್‌ನ ಹಲವಾರು ಮುಖ್ಯ ವಿಷಯಗಳ ಬಗ್ಗೆ ಉಪನ್ಯಾಸದಲ್ಲಿ ಪ್ರಸ್ತಾವಿಸಲಿದ್ದೇನೆ. ಇದು ಪ್ರತಿಯೋಬ್ಬರಿಗೂ ಉತ್ತಮ ಸಂಜೆಯಾಗುವ ವಿಶ್ವಾಸ ತನಗಿದೆ ಎಂದು ಲಾರ್ಡ್ಸ್‌ನಲ್ಲಿ 7 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮೆಕಲಮ್ ಪ್ರತಿಕ್ರಿಯಿಸಿದ್ದಾರೆ.
ಸ್ಪೋಟಕ ದಾಂಡಿಗ ಮೆಕಲಮ್ 99 ಟೆಸ್ಟ್‌ಗಳಲ್ಲಿ 38.48ರ ಸರಾಸರಿಯಲ್ಲಿ 6,273 ರನ್ ಗಳಿಸಿದ್ದಾರೆ. ಅ.1ರಂದು ಎಂಸಿಸಿ ವರ್ಲ್ಡ್ ಕ್ರಿಕೆಟ್ ಸಮಿತಿಗೆ ಆಯ್ಕೆಯಾಗಿದ್ದರು. ಎಂಸಿಎ ಅಧ್ಯಕ್ಷ ಮೈಕ್ ಬ್ರೆರ್ಲಿ ಹಾಗೂ ಎಂಸಿಸಿ ಕ್ರಿಕೆಟ್ ಮುಖ್ಯಸ್ಥ ಜಾನ್ ಸ್ಟೀಫನ್ ಸನ್ ಮೆಕಲಮ್‌ರನ್ನು ಸಮಿತಿಗೆ ಆಯ್ಕೆ ಮಾಡಿದ್ದರು.