ಫಿಕ್ಸಿಂಗ್ ಆರೋಪ ನಿರಾಕರಿಸಿದ ಜೊಕೊವಿಕ್
Update: 2016-01-20 23:54 IST
ಮೆಲ್ಬೋರ್ನ್, ಜ.20: ತಾನು 2007ರಲ್ಲಿ ಉದ್ದೇಶಪೂರ್ವಕವಾಗಿ ಪಂದ್ಯವನ್ನು ಸೋತಿದ್ದೆ ಎಂಬ ಇಟಲಿಯ ಮಾಧ್ಯಮದ ವರದಿಯನ್ನು ಸರ್ಬಿಯದ ಆಟಗಾರ ನೊವಾಕ್ ಜೊಕೊವಿಕ್ ಬುಧವಾರ ನಿರಾಕರಿಸಿದ್ದಾರೆ.
2007ರಲ್ಲಿ ನಡೆದಿದ್ದ ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ ಜೊಕೊವಿಕ್ ಅವರು ಇದೀಗ ನಿವೃತ್ತಿಯಾಗಿರುವ ಫ್ರಾನ್ಸ್ ಆಟಗಾರ ಫ್ಯಾಬ್ರಿಸ್ ಸ್ಯಾಂಟೊರೊ ವಿರುದ್ಧ ಸೋತಿದ್ದರು ಎಂದು ಇಟಲಿ ಸುದ್ದಿಪತ್ರಿಕೆ ಟುಟ್ಟೊಸ್ಪೋರ್ಟ್ಸ್ ವರದಿ ಮಾಡಿತ್ತು.
‘‘ಆ ವರದಿಯಲ್ಲಿ ಸತ್ಯಾಂಶವಿಲ್ಲ. ಅಗ್ರ ಆಟಗಾರರು ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತ ಪಂದ್ಯದ ಬಗ್ಗೆ ಯಾರೂ ಕೂಡ ಕಥೆ ಕಟ್ಟಬಹುದು’’ ಎಂದು ಜೊಕೊವಿಕ್ ಪ್ರತಿಕ್ರಿಯಿಸಿದ್ದಾರೆ.