ಗಾಯಾಳು ಮ್ಯಾಕ್ಸ್‌ವೆಲ್ ಅಂತಿಮ ಪಂದ್ಯಕ್ಕೆ ಡೌಟ್
Update: 2016-01-21 22:20 IST
ಕ್ಯಾನ್ಬೆರಾ, ಜ.21: ಆಸ್ಟ್ರೇಲಿಯದ ಮಧ್ಯಮ ಸರದಿಯ ದಾಂಡಿಗ ಗ್ಲೆನ್ ಮ್ಲಾಕ್ಸ್‌ವೆಲ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಪ್ರವಾಸಿ ಭಾರತ ವಿರುದ್ಧದ ಅಂತಿಮ ಪಂದ್ಯಕ್ಕೆ ಅಂತಿಮ ಹನ್ನೊಂದರಲ್ಲಿ ಆಡುವ ಸಾಧ್ಯತೆ ಇಲ್ಲ.
ಭಾರತಕ್ಕೆ ನಾಲ್ಕನೆ ಪಂದ್ಯದಲ್ಲಿ ಸೋಲುಣಿಸುವಲ್ಲಿ ಮ್ಯಾಕ್ಸ್‌ವೆಲ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಭಾರತದ ವಿರುದ್ಧ ಆಸ್ಟ್ರೇಲಿಯಕ್ಕೆ 348 ರನ್‌ಗಳ ಕಠಿಣ ಸವಾಲನ್ನು ವಿಧಿಸುವಲ್ಲಿ ನೆರವಾಗಿದ್ದರು.
ಮ್ಯಾಕ್ಸ್‌ವೆಲ್ 20 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 41 ರನ್ ಸಿಡಿಸಿದ್ದರು.
ಬ್ಯಾಟಿಂಗ್‌ನ ವೇಳೆ ಇಶಾಂತ್ ಶರ್ಮ ಎಸೆತದಲ್ಲಿ ಚೆಂಡನ್ನು ಎದುರಿಸುವ ಯತ್ನದಲ್ಲಿ ಮ್ಯಾಕ್ಸ್‌ವೆಲ್‌ರ ಬಲ ಮೊಣಕಾಲಿಗೆ ಗಾಯವಾಗಿತ್ತು.