×
Ad

ಆಸ್ಟ್ರೇಲಿಯನ್ ಓಪನ್‌: ಹೆವಿಟ್‌ಗೆ ಸೋಲುಣಿಸಿದ ಫೆರರ್

Update: 2016-01-21 22:53 IST

 ಮೆಲ್ಬೋರ್ನ್, ಜ.21: ಸ್ಪೇನ್‌ನ ಡೇವಿಡ್ ಫೆರರ್ ಆಸ್ಟ್ರೇಲಿಯದ ಮಾಜಿ ವಿಶ್ವದ ನಂ.1 ಆಟಗಾರ ಲೆಟನ್ ಹೆವಿಟ್‌ರನ್ನು ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೋಲಿಸುವ ಮೂಲಕ ಹೆವಿಟ್ ಶಕೆಗೆ ಅಂತ್ಯ ಹಾಡಿದರು.

ವಿಶ್ವದ ನಂ.8ನೆ ಆಟಗಾರ ಫೆರರ್ ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಟೂರ್ನಿ ಆರಂಭಕ್ಕೆ ಮೊದಲೇ ನಿವೃತ್ತಿ ಘೋಷಿಸಿದ್ದ 34ರ ಹರೆಯದ ಹೆವಿಟ್‌ರನ್ನು 6-2, 6-4, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

33ರ ಹರೆಯದ ಫೆರರ್ ಆರಂಭದಲ್ಲೇ ಮೇಲುಗೈ ಸಾಧಿಸಿದ್ದು, ಕೊನೆಯ ತನಕ ತೀವ್ರತೆ ಕಾಯ್ದುಕೊಂಡರು. ಫೆರರ್ ಮೂರನೆ ಸುತ್ತಿನಲ್ಲಿ ಅಮೆರಿಕದ ಸ್ಟೀವ್ ಜಾನ್ಸನ್ ರನ್ನು ಎದುರಿಸಲಿದ್ದಾರೆ.

ಸ್ಟೆಪನೆಕ್‌ಗೆ ವಾವ್ರಿಂಕ ಶಾಕ್: ನಾಲ್ಕನೆ ಶ್ರೇಯಾಂಕದ ಸ್ಟಾನ್ ವಾವ್ರಿಂಕ ಆಸ್ಟ್ರೇಲಿಯನ್ ಓಪನ್‌ನ 2ನೆ ಸುತ್ತಿನ ಪಂದ್ಯದಲ್ಲಿ 37ರ ಹರೆಯದ ರಾಡೆಕ್ ಸ್ಟೆಪನೆಕ್‌ರನ್ನು 6-2, 6-3, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಶಾಕ್ ನೀಡಿದರು.

ಎರಡು ವರ್ಷಗಳ ಹಿಂದೆ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಚಾಂಪಿಯನ್ ಆಗಿರುವ ವಾವ್ರಿಂಕ ಮೂರನೆ ಸುತ್ತಿನಲ್ಲಿ ಅಮೆರಿಕದ ಜಾಕ್ ಸಾಕ್ ಅಥವಾ ರೆುಕ್‌ನ ಲುಕಾ ರೊಸೊಲ್‌ರನ್ನು ಎದುರಿಸಲಿದ್ದಾರೆ.

ಮರ್ರೆ ಮೂರನೆ ಸುತ್ತಿಗೆ

ಆಸ್ಟ್ರೇಲಿಯದ ಶ್ರೇಯಾಂಕರಹಿತ ಆಟಗಾರ ಸ್ಯಾಮ್ ಗ್ರಾತ್‌ರನ್ನು 6-0, 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದ ಬ್ರಿಟನ್‌ನ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಮೂರನೆ ಸುತ್ತಿಗೆ ತಲುಪಿದ್ದಾರೆ.

ವಿಶ್ವದ ನಂ.2ನೆ ಆಟಗಾರ ಮರ್ರೆ ಕೇವಲ 29 ನಿಮಿಷಗಳಲ್ಲಿ ಮೊದಲ ಸೆಟ್‌ನ್ನು ಗೆದ್ದುಕೊಂಡರು. 2 ಹಾಗೂ ಮೂರನೆ ಸಟ್‌ನಲ್ಲೂ ಪ್ರಾಬಲ್ಯ ಸಾಧಿಸಿದ ಮರ್ರೆ ಸುಲಭ ಜಯ ಸಾಧಿಸಿದರು. ಅವರು ಮುಂದಿನ ಸುತ್ತಿನಲ್ಲಿ ಪೋರ್ಚುಗಲ್‌ನ ಜಾವೊ ಸೌಸಾರನ್ನು ಎದುರಿಸಲಿದ್ದ್ದಾರೆ. 

ತವರು ನೆಲದಲ್ಲಿ ಹೆವಿಟ್ ವಿದಾಯ

ಆಸ್ಟ್ರೇಲಿಯದ ಟೆನಿಸ್ ದಂತಕತೆ ಲೆಟನ್ ಹೆವಿಟ್ ಗುರುವಾರ ಆಸ್ಟ್ರೇಲಿಯನ್ ಓಪನ್‌ನಲ್ಲಿ ವೃತ್ತಿಜೀವನದಿಂದ ನಿವೃತ್ತಿಯಾದರು.

 ಎರಡು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಹೆವಿಟ್ ಟೆನಿಸ್‌ನ ಹೆಚ್ಚಿನ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಅಭಿಮಾನಿಗಳ ಪಾಲಿಗೆ ಹೀರೋವಾಗಿದ್ದಾರೆ. ಹೆವಿಟ್ ಗುರುವಾರ ಸ್ಪೇನ್‌ನ ಡೇವಿಡ್ ಫೆರರ್ ವಿರುದ್ಧ ಎರಡನೆ ಸುತ್ತಿನಲ್ಲಿ ಸೋಲುವ ಮೂಲಕ ವೃತ್ತಿಜೀವನ ಕೊನೆಗೊಳಿಸಿದ್ದಾರೆ.

‘‘ತವರು ನೆಲದಲ್ಲಿ ಟೆನಿಸ್‌ಗೆ ವಿದಾಯ ಹೇಳುತ್ತಿರುವುದು ನನ್ನ ಭಾಗ್ಯ. 20 ವರ್ಷಗಳ ಕಾಲ ಟೆನಿಸ್ ಆಡುವ ಅಪೂರ್ವ ಅವಕಾಶ ನನಗೆ ಲಭಿಸಿತ್ತು. ನಾನು ಲಾಕರ್‌ರೂಮ್‌ನಲ್ಲಿ ಏನೂ ಬಿಟ್ಟಿಲ್ಲ. ಶೇ.100ರಷ್ಟು ಪ್ರದರ್ಶನ ನೀಡಿರುವ ಹೆಮ್ಮೆ ನನಗಿದೆ’’ಎಂದು 34ರ ಹರೆಯದ ಹೆವಿಟ್ ಭಾವುಕರಾಗಿ ನುಡಿದರು.

ಶ್ವಾನಕ್ಕೆ ಹೆವಿಟ್ ಹೆಸರು: ಮರ್ರೆ ಬಯಕೆ

ಮೆಲ್ಬೋರ್ನ್, ಜ.21: ಆಸ್ಟ್ರೇಲಿಯದ ಟೆನಿಸ್ ಸ್ಟಾರ್ ಲೆಟನ್ ಹೆವಿಟ್ ನಿವೃತ್ತಿಯಾಗಿರುವುದಕ್ಕೆ ಎಲ್ಲೆಡೆಯಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ನಡುವೆ ಬ್ರಿಟನ್‌ನ ಟೆನಿಸ್ ಆಟಗಾರ ಆ್ಯಂಡಿ ಮರ್ರೆ ತನ್ನ ಪ್ರೀತಿಯ ನಾಯಿಗೆ ಆಸ್ಟ್ರೇಲಿಯದ ಸ್ಟಾರ್ ಆಟಗಾರನ ಹೆಸರಿಡುವುದಾಗಿ ತಿಳಿಸಿದ್ದಾರೆ.

‘‘ತನಗೆ ಬಾಲ್ಯದಿಂದಲೂ ಹೆವಿಟ್ ಎಂದರೆ ತುಂಬಾ ಇಷ್ಟ. ಇದೀಗ ನಿವೃತ್ತಿಯಾಗಿರುವ ಹೆವಿಟ್‌ಗೆ ಗೌರವ ಸೂಚಕವಾಗಿ ತನ್ನ ಪ್ರೀತಿಯ ನಾಯಿಗೆ ಅವರ ಹೆಸರನ್ನೇ ಇಡಲು ಬಯಸಿದ್ದೇನೆ. ಹೆವಿಟ್ ನನಗೆ ಆದರ್ಶ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಅವರನ್ನು ಯಾವಾಗಲೂ ಭೇಟಿಯಾಗುತ್ತೇನೆ’’ಎಂದು ಮರ್ರೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News