×
Ad

ಐಸಿಸಿ ಟ್ವೆಂಟಿ-20 ವಿಶ್ವಕಪ್: ಐರ್ಲೆಂಡ್ ಬೌಲಿಂಗ್ ಸಲಹೆಗಾರರಾಗಿ ವಾಸ್

Update: 2016-01-21 22:59 IST

 ಡುಬ್ಲಿನ್, ಜ.21: ಶ್ರೀಲಂಕಾದ ಮಾಜಿ ವೇಗದ ಬೌಲರ್ ಚಾಮಿಂಡ ವಾಸ್ ಮುಂಬರುವ ಐಸಿಸಿ ವಿಶ್ವಕಪ್ ಟ್ವೆಂಟಿ-20 ಟೂರ್ನಿಯ ವೇಳೆ ಐರ್ಲೆಂಡ್ ತಂಡದಲ್ಲಿ ಬೌಲಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

 41ರ ಹರೆಯದ ವಾಸ್ ಮುಂದಿನ ತಿಂಗಳು ಐರ್ಲೆಂಡ್ ತಂಡವನ್ನು ಸೇರಿಕೊಳ್ಳಲಿದ್ದು, ವಿಶ್ವಕಪ್ ಟೂರ್ನಿ ಮುಗಿಯುವ ತನಕ ತಂಡದೊಂದಿಗೆ ಇರಲಿದ್ದಾರೆ. ವಿಶ್ವಕಪ್ ಟೂರ್ನಿಯು ಭಾರತದಲ್ಲಿ ಮಾ.8 ರಿಂದ ಎ.3ರ ತನಕ ನಡೆಯಲಿದೆ.

‘‘ಐರ್ಲೆಂಡ್ ತಂಡಕ್ಕೆ ಕೋಚ್ ನೀಡಲು ನನಗೆ ತುಂಬಾ ಸಂತೋಷವಾಗುತ್ತಿದೆ. ಆ ತಂಡದಲ್ಲಿ ಬಹಳಷ್ಟು ಮಂದಿ ಪ್ರತಿಭಾವಂತ ಹಾಗೂ ಅನುಭವಿ ಆಟಗಾರರಿದ್ದಾರೆ’’ಎಂದು ವಾಸ್ ಹೇಳಿದ್ದಾರೆ.

ಎಡಗೈ ವೇಗದ ಬೌಲರ್ ವಾಸ್ 111 ಟೆಸ್ಟ್ ಹಾಗೂ 322 ಏಕದಿನ ಪಂದ್ಯಗಳಲ್ಲಿ ಒಟ್ಟು 755 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಡಿ.2001ರಲ್ಲಿ ಝಿಂಬಾಬ್ವೆ ವಿರುದ್ಧದ ಏಕದಿನದಲ್ಲಿ ಜೀವನಶ್ರೇಷ್ಠ 19 ರನ್‌ಗೆ 8 ವಿಕೆಟ್‌ಗಳನ್ನು ಕಬಳಿಸಿದ್ದರು.

ನಿವೃತ್ತಿಯ ನಂತರ ವಾಸ್ ಅವರು ಶ್ರೀಲಂಕಾ ಹಾಗೂ ನ್ಯೂಝಿಲೆಂಡ್ ತಂಡಗಳು ಹಾಗೂ ಐಪಿಎಲ್‌ನಲ್ಲಿ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News