×
Ad

ಆಸ್ಟ್ರೇಲಿಯನ್ ಓಪನ್: ಪೇಸ್, ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ದ್ವಿತೀಯ ಸುತ್ತಿಗೆ

Update: 2016-01-24 21:49 IST

ಮೆಲ್ಬೋರ್ನ್, ಜ.24: ಆಸ್ಟ್ರೇಲಿಯನ್ ಓಪನ್‌ನಲ್ಲಿ ರವಿವಾರ ಭಾರತದ ಟೆನಿಸ್ ಆಟಗಾರರಿಗೆ ಶುಭ ದಿನವಾದ ಪರಿಣಮಿಸಿತು. ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ತಮ್ಮ ಜೊತೆಗಾರ್ತಿಯರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ.


ಸ್ವಿಸ್‌ನ ಮಾರ್ಟಿನಾ ಹಿಂಗಿಸ್‌ರೊಂದಿಗೆ ಮಿಶ್ರ ಡಬಲ್ಸ್ ಪಂದ್ಯವನ್ನು ಆಡಿರುವ ಪೇಸ್ ಒಂದು ಗಂಟೆ, 9 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅನಸ್ಟೇಸಿಯ ಪಾವ್ಲಚೆಂಕೊವಾ ಹಾಗೂ ಡೊಮಿನಿಕ್ ಇಂಗ್ಲಾಟ್‌ರನ್ನು 6-3, 7-5 ಸೆಟ್‌ಗಳ ಅಂತರದಿಂದ ಮಣಿಸಿದರು.


ಮತ್ತೊಂದು ಮಿಶ್ರ ಡಬಲ್ಸ್‌ನಲ್ಲಿ ಮೂರನೆ ಶ್ರೇಯಾಂಕದ ಬೋಪಣ್ಣ ಹಾಗೂ ಚೈನೀಸ್ ತೈಪೆಯ ಯಂಗ್-ಜಾನ್ ಚಾನ್ ಅವರು ಆಸ್ಟ್ರೇಲಿಯದ ಜೋಡಿ ಜಾನ್ ಮಿಲ್ಮಾನ್ ಹಾಗೂ ಕಿಂಬೆರ್ಲಿ ಬಿರೆಲ್‌ರನ್ನು 48 ನಿಮಿಷಗಳ ಹೋರಾಟದಲ್ಲಿ 7-5, 6-1 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.


ಪೇಸ್-ಹಿಂಗಿಸ್ ಜೋಡಿ ಮುಂದಿನ ಸುತ್ತಿನಲ್ಲಿ ಅಮೆರಿಕದ ಸ್ಲೊಯಾನೆ ಸ್ಟೆಫನ್ಸ್ ಹಾಗೂ ಜಿಯಾನ್-ಜುಲಿಯೆನ್ ರೊಜೆರ್ ಅವರನ್ನು, ಬೋಪಣ್ಣ ಹಾಗೂ ಚಾನ್ ಅವರು ಆ್ಯಂಡ್ರಿಯಾ ಹ್ಲಾವಾಕೊವಾ ಹಾಗೂ ಲುಕಾಸ್ ಕುಬಾಟ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News