×
Ad

ಮೊದಲ ಟ್ವೆಂಟಿ-20: ಭಾರತಕ್ಕೆ 37ರನ್ ಗಳ ಜಯ, ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ

Update: 2016-01-26 14:48 IST

ಕೊಹ್ಲಿ ಜೀವನಶ್ರೇಷ್ಠ ಬ್ಯಾಟಿಂಗ್

ಅಡಿಲೇಡ್, ಜ.26: ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ 3ನೆ ವಿಕೆಟ್‌ಗೆ ಸೇರಿಸಿದ 134 ರನ್ ಜೊತೆಯಾಟದ ನೆರವಿನಿಂದ ಭಾರತ ತಂಡ ಮಂಗಳವಾರ ಇಲ್ಲಿ ನಡೆದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯದ ಗೆಲುವಿಗೆ 189 ರನ್ ಗುರಿ ನೀಡಿದೆ. ವಿರಾಟ್ ಕೊಹ್ಲಿ, ಸುರೇಶ್ ರೈನಾ ಸಾಹಸದಿಂದ ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿತು.

ವಿರಾಟ್ ಕೊಹ್ಲಿ (ಔಟಾಗದೆ 90 ರನ್, 55 ಎಸೆತ, 9 ಬೌಂಡರಿ, 2 ಸಿಕ್ಸರ್) ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. ಪೋಷಕನ ಪಾತ್ರ ನಿರ್ವಹಿಸಿದ ಸುರೇಶ್ ರೈನಾ 34 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ಗಳ ಸಹಿತ 41 ರನ್ ಗಳಿಸಿದರು. ಏಕದಿನ ಸರಣಿಯ ಪ್ರದರ್ಶನವನ್ನು ಚುಟುಕು ಪಂದ್ಯದಲ್ಲೂ ಮುಂದುವರಿಸಿದ ರೋಹಿತ್ ಶರ್ಮ ಆಸ್ಟ್ರೇಲಿಯದ ವೇಗದ ಬೌಲರ್ ಶಾನ್ ಟೇಟ್ ಎಸೆದ ಮೊದಲ ಓವರ್‌ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ಟೇಟ್ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರೋಹಿತ್(31 ರನ್) ಶಿಖರ್ ಧವನ್(5)ರೊಂದಿಗೆ ಮೊದಲ ವಿಕೆಟ್‌ಗೆ 41 ರನ್ ಜೊತೆಯಾಟ ನಡೆಸಿದರು.
 ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಇನಿಂಗ್ಸ್‌ನ 5ನೆ ಓವರ್‌ನ ಮೊದಲ ಎಸೆತದಲ್ಲಿ ಉತ್ತಮ ಮೊತ್ತದತ್ತ ಸಾಗುತ್ತಿದ್ದ ರೋಹಿತ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ವ್ಯಾಟ್ಸನ್ 5ನೆ ಓವರ್‌ನ 5ನೆ ಎಸೆತದಲ್ಲಿ ಶಿಖರ್ ಧವನ್‌ಗೆ ವಿಕೆಟ್ ಒಪ್ಪಿಸಿದರು.

 
ಆಗ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಮೂರನೆ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಪ್ರಸ್ತುತ ಆಸ್ಟ್ರೇಲಿಯ ಪ್ರವಾಸದಲ್ಲಿ ಶ್ರೇಷ್ಠ ಫಾರ್ಮ್‌ನಲ್ಲಿರುವ ಕೊಹ್ಲಿ 32 ಎಸೆತಗಳಲ್ಲಿ 10ನೆ ಟ್ವೆಂಟಿ-20 ಅರ್ಧಶತಕ ಸಿಡಿಸಿದರು. ರೈನಾ ವಿಕೆಟ್ ಕಬಳಿಸಿದ ಫಾಕ್ನರ್ 3ನೆ ವಿಕೆಟ್ ಜೊತೆಯಾಟಕ್ಕೆ ಅಂತ್ಯ ಹಾಡಿದರು. ನಾಯಕ ಎಂಎಸ್ ಧೋನಿ 3 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಗಳ ಸಹಿತ ಔಟಾಗದೆ 11 ರನ್ ಗಳಿಸಿದರು. ಆಸ್ಟ್ರೇಲಿಯದ ಬೌಲಿಂಗ್‌ನಲ್ಲಿ ವೇಗದ ಬೌಲರ್ ಶಾನ್ ಟೇಟ್ ದುಬಾರಿ ಬೌಲರ್ (4 ಓವರ್, 45 ರನ್) ಎನಿಸಿಕೊಂಡರು. ವ್ಯಾಟ್ಸನ್(2-24) 2 ವಿಕೆಟ್ ಪಡೆದರು.
ಆಸ್ಟ್ರೇಲಿಯದಿಂದ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ಭಾರತ ತಂಡ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾಗೆ ಚೊಚ್ಚಲ ಪಂದ್ಯ ಆಡುವ ಅವಕಾಶ ನೀಡಿತ್ತು. ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಆಶೀಶ್ ನೆಹ್ರಾ ಕೂಡ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು.
........

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News