×
Ad

ಅಂಡರ್-19 ವಿಶ್ವಕಪ್:ದಕ್ಷಿಣ ಆಫ್ರಿಕ ವಿರುದ್ಧ ಬಾಂಗ್ಲಾಕ್ಕೆ ಜಯ

Update: 2016-01-27 23:37 IST

ಚಿತ್ತಗಾಂಗ್, ಜ.27: ಆತಿಥೇಯ ಬಾಂಗ್ಲಾದೇಶ ತಂಡ ಬುಧವಾರ ಇಲ್ಲಿ ಆರಂಭವಾದ ಅಂಡರ್-19 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕವನ್ನು 43 ರನ್‌ಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 240 ರನ್ ಗಳಿಸಿತು. ನಝ್ಮುಲ್ ಹುಸೇನ್(73ರನ್), ಪಿನಾಕ್ ಘೋಷ್(43) ಹಾಗೂ ಜೇರಝ್ ಶೇಕ್(46) ಉಪಯುಕ್ತ ಕಾಣಿಕೆ ನೀಡಿದರು.

ಆರಂಭಿಕ ದಾಂಡಿಗ ಲಿಯಾಮ್ ಸ್ಮಿತ್ ಶತಕ ಬಾರಿಸಿದ ಹೊರತಾಗಿಯೂ ದಕ್ಷಿಣ ಆಫ್ರಿಕ ತಂಡ 49ನೆ ಓವರ್‌ನಲ್ಲಿ 197 ರನ್‌ಗೆ ಆಲೌಟಾಯಿತು.

ಬಾಂಗ್ಲಾದೇಶ ಅಂಡರ್-19 ವಿಶ್ವಕಪ್‌ನಲ್ಲಿ ಆಫ್ರಿಕ ವಿರುದ್ಧ ಮೊದಲ ಬಾರಿ ಗೆಲುವು ಸಾಧಿಸಿದೆ. ಕಳೆದ 2 ವರ್ಷಗಳಲ್ಲಿ ಆಡಿರುವ 15 ಪಂದ್ಯಗಳಲ್ಲಿ 12ನೆ ಗೆಲುವು ಸಾಧಿಸಿದೆ.

ಬಾಂಗ್ಲಾದೇಶ ಮುಂದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಪ್ರಶಸ್ತಿ ಸ್ಪರ್ಧಿ ಇಂಗ್ಲೆಂಡ್ ತಂಡ ಫಿಜಿ ತಂಡವನ್ನು 299 ರನ್‌ಗಳ ಅಂತರದಿಂದ ಸೋಲಿಸಿತು. ಇಂಗ್ಲೆಂಡ್ ತಂಡ ಡ್ಯಾನ್ ಲಾರೆನ್ಸ್ (174)ಹಾಗೂ ಜಾಕ್ ಬಹ್ರಾಮ್(148) ಶತಕದ ನೆರವಿನಿಂದ 3 ವಿಕೆಟ್‌ಗೆ 371 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News