ಶುಮಾಕರ್ ಪುತ್ರ ಮೈಕ್ ಭಾರತಕ್ಕೆ
Update: 2016-01-27 23:41 IST
ಚೆನ್ನೈ, ಜ.27: ಫಾರ್ಮುಲಾ ಒನ್ ದಂತಕತೆ, ಏಳು ಬಾರಿಯ ಚಾಂಪಿಯನ್ ಮೈಕಲ್ ಶುಮಾಕರ್ ಪುತ್ರ ಮೈಕ್ ಶುಮಾಕರ್ ಇದೇ ಮೊದಲ ಬಾರಿ ಭಾರತಕ್ಕೆ ಆಗಮಿಸಲಿದ್ದು, ವಾರಾಂತ್ಯದಲ್ಲಿ ಮದ್ರಾಸ್ ರೇಸ್ ಟ್ರಾಕ್‌ನಲ್ಲಿ ನಡೆಯಲಿರುವ ಎಂಆರ್‌ಎಫ್ ಚಾಲೆಂಜ್‌ನ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.
16ರಹರೆಯದ ಮೈಕ್ ಮೊದಲ ಬಾರಿ ಯುರೋಪ್‌ನ ಹೊರಗೆ ಎಂಆರ್‌ಎಫ್ 2000 ಕಾರಿನೊಂದಿಗೆ ಭಾಗವಹಿಸುತ್ತಿದ್ದಾರೆ. ಮೈಕ್ ತಂದೆ ಮೈಕಲ್ ಶುಮಾಕರ್‌ಗೆ ಡಿ.2013ರಂದು ಫ್ರಾನ್ಸ್‌ನಲ್ಲಿ ಸ್ಕೈಲಿಂಗ್ ನಿರತರಾಗಿದ್ದಾಗ ಆಯ ತಪ್ಪಿ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು.
ಶುಮಾಕರ್ ಈಗಲೂ ಕೋಮಾ ಸ್ಥಿತಿಯಲ್ಲಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಆರ್‌ಎಫ್ ರೇಸ್‌ನಲ್ಲಿ ಭಾರತ ನೇತೃತ್ವವನ್ನು ಚೆನ್ನೈನ ತರುಣ್ ರೆಡ್ಡಿ ವಹಿಸಿದ್ದಾರೆ