×
Ad

ಐಸಿಸಿ ರ್ಯಾಂಕಿಂಗ್: ಅಶ್ವಿನ್ ನಂ.1 ಸ್ಥಾನ ಭದ್ರ,ಭಾರತ ನಂ.1

Update: 2016-01-27 23:44 IST

ದುಬೈ, ಜ.27: ಐಸಿಸಿ ರ್ಯಾಂಕಿಂಗ್‌ನಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನ ಉಳಿಸಿಕೊಂಡಿದ್ದಾರೆ.

ಚೆನ್ನೈನ ಅಶ್ವಿನ್ ದಕ್ಷಿಣ ಆಫ್ರಿಕ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 31 ವಿಕೆಟ್‌ಗಳನ್ನು ಕಬಳಿಸಿದ್ದರು. ಬ್ಯಾಟಿಂಗ್‌ನಲ್ಲಿ 31.68ರ ಸರಾಸರಿ ಹೊಂದಿದ್ದು, 124 ಗರಿಷ್ಠ ಸ್ಕೋರಾಗಿತ್ತು.

ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಯಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದರು. ಜಡೇಜ ಟಾಪ್-10ರ ಪಟ್ಟಿಯಲ್ಲಿರುವ ಭಾರತದ ಇನ್ನೋರ್ವ ಬೌಲರ್ ಆಗಿದ್ದಾರೆ. ಇಂಗ್ಲೆಂಡ್‌ನ ಸ್ಟುವರ್ಟ್ ಬಿನ್ನಿ ನಂ.1 ಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ಪಟ್ಟಿಯಲ್ಲಿ ಅಜಿಂಕ್ಯ ರಹಾನೆ ಟಾಪ್-10ರಲ್ಲಿ ಭಾರತದ ಏಕೈಕ ದಾಂಡಿಗನಾಗಿದ್ದಾರೆ. ರಹಾನೆ ಆಸ್ಟ್ರೇಲಿಯದ ಆಡಮ್ ವೋಗ್ಸ್‌ರೊಂದಿಗೆ 10ನೆ ಸ್ಥಾನ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ವಿಶ್ವದ ನಂ.1 ದಾಂಡಿಗನಾಗಿ ಮುಂದುವರಿದಿದ್ದಾರೆ.

ಭಾರತ ನಂ.1

ಮಂಗಳವಾರ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವ ಹಿನ್ನೆಲೆಯಲ್ಲಿ ಭಾರತ ನಾಲ್ಕೂವರೆ ವರ್ಷಗಳ ಬಳಿಕ ನಂ.1 ಸ್ಥಾನವನ್ನು ಮರಳಿ ಪಡೆದುಕೊಂಡಿದೆ.

ಭಾರತ 2011ರ ಆಗಸ್ಟ್‌ನಲ್ಲಿ ಮೊದಲ ಬಾರಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News