ಶ್ರೀಲಂಕಾ ಕೋಚ್ ಆಗಿ ಗ್ರಹಾಂ ಫೋರ್ಡ್ ಆಯ್ಕೆ
Update: 2016-01-29 23:39 IST
ಕೊಲಂಬೊ, ಜ.29: ಶ್ರೀಲಂಕಾದ ಪ್ರಧಾನ ಕೋಚ್ ಆಗಿ ದಕ್ಷಿಣ ಆಫ್ರಿಕದ ಗ್ರಹಾಂ ಫೋರ್ಡ್ ಆಯ್ಕೆಯಾಗಿದ್ದಾರೆ.
2012ರಲ್ಲಿ 55ರ ಹರೆಯದ ಫೋರ್ಡ್ ಎರಡು ವರ್ಷಗಳ ಅವಧಿಗೆ ಶ್ರೀಲಂಕಾ ಕೋಚ್ ಆಗಿ ನೇಮಕಗೊಂಡಿದ್ದರು. ಆ ನಂತರ ಅವರು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸರ್ರೆ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಫೋರ್ಡ್ ಫೆ.1 ರಿಂದ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಸೆಪ್ಟಂಬರ್ ಆರಂಭದಲ್ಲಿ ಲಂಕಾದ ಟೆಸ್ಟ್ ತಂಡದ ಮಾಜಿ ನಾಯಕ ಮರ್ವನ್ ಅಟಪಟ್ಟು ರಾಜೀನಾಮೆ ನೀಡಿದ ಬಳಿಕ ಶ್ರೀಲಂಕಾದ ಪ್ರಧಾನ ಕೋಚ್ ಹುದ್ದೆ ತೆರವಾಗಿತ್ತು.
ಫೋರ್ಡ್ 2004ರಲ್ಲಿ ಇಂಗ್ಲೀಷ್ ಕೌಂಟಿ ತಂಡ ಕೆಂಟ್‌ಗೆ ಕ್ರಿಕೆಟ್ ನಿರ್ದೇಶಕರಾಗಿ ಆಯ್ಕೆಯಾಗುವ ಮೊದಲು ದಕ್ಷಿಣ ಆಫ್ರಿಕ ತಂಡದಲ್ಲಿ 1999 ರಿಂದ 2001ರ ತನಕ ಕೋಚ್ ಆಗಿದ್ದರು.