ಏಕದಿನ: ನ್ಯೂಝಿಲೆಂಡ್‌ಗೆ ಸರಣಿ
Update: 2016-01-31 23:44 IST
ಆಕ್ಲಂಡ್, ಜ.31: ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನವನ್ನು 3 ವಿಕೆಟ್‌ಗಳ ಅಂತರದಿಂದ ಮಣಿಸಿರುವ ನ್ಯೂಝಿಲೆಂಡ್ ತಂಡ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ರವಿವಾರ ನಡೆದ ಮಳೆ ಬಾಧಿತ ಪಂದ್ಯದಲ್ಲಿ ನ್ಯೂಝಿಲೆಂಡ್ 2 ಎಸೆತಗಳು ಬಾಕಿ ಇರುವಾಗಲೇ 263 ರನ್ ಗಳಿಸಿತು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 48 ಓವರ್‌ಗಳಲ್ಲಿ 290 ರನ್ ಗಳಿಸಿ ಆಲೌಟಾಯಿತು. ಬಾಬರ್ ಆಝಂ 83 ರನ್ ಹಾಗೂ ಮುಹಮ್ಮದ್ ಹಫೀಝ್ 76 ರನ್‌ಗಳ ಕೊಡುಗೆ ನೀಡಿದ್ದರು.
ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಗೆಲುವಿನ ಗುರಿಯನ್ನು 43 ಓವರ್‌ಗಳಲ್ಲಿ 263 ರನ್‌ಗೆ ಪರಿಷ್ಕರಿಸಲಾಯಿತು. ಕೇನ್ ವಿಲಿಯಮ್ಸನ್(84) ಹಾಗೂ ಮಾರ್ಟಿನ್ ಗಪ್ಟಿಲ್(82) ಅರ್ಧಶತಕದ ಕೊಡುಗೆಯ ಬೆಂಬಲದಿಂದ ಆತಿಥೇಯ ನ್ಯೂಝಿಲೆಂಡ್ 3 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿತು.