×
Ad

ಫೆ.6: ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಹರಾಜು

Update: 2016-01-31 23:45 IST

ಹೊಸದಿಲ್ಲಿ, ಜ.31: ಬೆಂಗಳೂರಿನಲ್ಲಿ ಫೆ.6 ರಂದು 2016ರ ಆವೃತ್ತಿಯ ಐಪಿಎಲ್‌ಗೆ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 315 ಕ್ರಿಕೆಟಿಗರು ಭಾಗಿಯಾಗಲಿದ್ದಾರೆ.

714 ಕ್ರಿಕೆಟಿಗರ ಪಟ್ಟಿಯನ್ನು 315ಕ್ಕೆ ಕಡಿತಗೊಳಿಸಲಾಗಿದ್ದು, ಇದರಲ್ಲಿ 130 ಅಂತಾರಾಷ್ಟ್ರೀಯ ಪಂದ್ಯ ಆಡಿರುವ ಆಟಗಾರರು, 219 ಹೊಸ ಆಟಗಾರರು ಹಾಗೂ ಅಸೋಸಿಯೇಟ್ ದೇಶದ ಇಬ್ಬರು ಆಟಗಾರರಿದ್ದಾರೆ. ಇವರ ಪೈಕಿ 230 ಆಟಗಾರರು ಭಾರತ, 121 ವಿದೇಶಿ ಆಟಗಾರರಿದ್ದಾರೆ.

ಹರಾಜಿನಲ್ಲಿ ಆಸ್ಟ್ರೇಲಿಯದ 29 ಕ್ರಿಕೆಟಿಗರಿದ್ದಾರೆ. ಆ ನಂತರ ಭಾರತ(26), ವೆಸ್ಟ್‌ಇಂಡೀಸ್(20), ದಕ್ಷಿಣ ಆಫ್ರಿಕ (18), ಶ್ರೀಲಂಕಾ(16), ನ್ಯೂಝಿಲೆಂಡ್(9), ಇಂಗ್ಲೆಂಡ್(7) ಹಾಗೂ ಬಾಂಗ್ಲಾದೇಶದ(5) ಆಟಗಾರರಿದ್ದಾರೆ.

ಯುವರಾಜ್ ಸಿಂಗ್, ಕೆವಿನ್ ಪೀಟರ್ಸನ್, ಆಶೀಷ್ ನೆಹ್ರಾ, ಶೇನ್ ವ್ಯಾಟ್ಸನ್, ಇಶಾಂತ್ ಶರ್ಮ, ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್, ಸ್ಟುವರ್ಟ್ ಬಿನ್ನಿ ಹಾಗೂ ಧವಲ್ ಕುಲಕರ್ಣಿ ಮೂಲ ಬೆಲೆ 2 ಕೋಟಿ ರೂ. ಹೊಂದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News