ಕಿಡಂಬಿ ಶ್ರೀಕಾಂತ್‌ಗೆ ಸಿಂಗಲ್ಸ್ ಪ್ರಶಸ್ತಿ
Update: 2016-01-31 23:50 IST
ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ
ಲಕ್ನೋ, ಜ.31: ಭಾರತದ ಅಗ್ರ ಶ್ರೇಯಾಂಕದ ಆಟಗಾರ ಕೆ.ಶ್ರೀಕಾಂತ್ ಸೈಯದ್ ಮೋದಿ ಗ್ರಾನ್‌ಪ್ರಿ ಗೋಲ್ಡ್ ಟೂರ್ನಿಯಲ್ಲಿ ಪುರುಷರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂ.9ನೆ ಆಟಗಾರ ಶ್ರೀಕಾಂತ್ ಅವರು ಚೀನಾದ ಹ್ಯೂಯಾಂಗ್ ಯೂಕ್ಸಿಯಾಂಗ್‌ರನ್ನು 21-13, 14-21, 21-14 ಗೇಮ್‌ಗಳ ಅಂತರದಿಂದ ಮಣಿಸಿದರು.
ಕಳೆದ ವರ್ಷ ಲಕ್ನೋದಲ್ಲಿ ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಶ್ರೀಕಾಂತ್‌ಗೆ ಇದು ಐದನೆ ಪ್ರಶಸ್ತಿಯಾಗಿದೆ. ಶ್ರೀಕಾಂತ್ 2013ರಲ್ಲಿ ಥಾಯ್ಲೆಂಡ್ ಜಿಪಿ ಗೋಲ್ಡ್, 2014ರಲ್ಲಿ ಚೀನಾ ಓಪನ್ ಸರಣಿ, ಕಳೆದ ವರ್ಷ ಸ್ವಿಸ್ ಓಪನ್ ಹಾಗೂ ಇಂಡಿಯಾ ಸೂಪರ್ ಸರಣಿಯನ್ನು ಜಯಿಸಿದ್ದರು.
ಕೊರಿಯಾದ ಸಂಗ್ ಜಿ ಹ್ಯೂನ್ ಜಪಾನ್‌ನ ಸಯಾಕಾ ಸಾಟೊರನ್ನು 12-21, 21-18, 21-18 ಗೇಮ್‌ಗಳ ಅಂತರದಿಂದ ಮಣಿಸಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ. 1