×
Ad

ಟ್ವೆಂಟಿ-20 ವಿಶ್ವಕಪ್: ಫಿಂಚ್ ಅಲಭ್ಯ?

Update: 2016-02-01 23:12 IST

ಸಿಡ್ನಿ, ಫೆ.1: ಮಂಡಿನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯದ ನಾಯಕ ಆ್ಯರೊನ್ ಫಿಂಚ್ ಮುಂದಿನ ತಿಂಗಳು ಭಾರತದಲ್ಲಿ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ.

‘‘ಫಿಂಚ್‌ಗೆ ಸರ್ಜರಿಯ ಅಗತ್ಯ ಕಂಡುಬರುತ್ತಿಲ್ಲ. ಆದರೆ, ಅವರು ಗಾಯದಿಂದ ಚೇತರಿಸಿಕೊಳ್ಳಲು ಇನ್ನಷ್ಟು ಸಮಯಬೇಕಾಗಬಹುದು. ಟೂರ್ನಿ ಹತ್ತಿರವಾಗುವ ತನಕವೂ ಅವರು ಫಿಟ್‌ನೆಸ್ ಪಡೆಯುವ ಸಾಧ್ಯತೆಯಿಲ್ಲ’’ ಎಂದು ಕ್ರಿಕೆಟ್ ಆಸ್ಟ್ರೇಲಿಯ ಸೋಮವಾರ ಹೇಳಿದೆ.

ಫಿಂಚ್ ಶುಕ್ರವಾರ ಭಾರತ ವಿರುದ್ದ ಮೆಲ್ಬೋರ್ನ್‌ನಲಿ ್ಲನಡೆದಿದ್ದ ಎರಡನೆ ಟ್ವೆಂಟಿ-20 ಪಂದ್ಯದ ವೇಳೆ ವಿಕೆಟ್ ನಡುವೆ ರನ್‌ಗಾಗಿ ಓಡುತ್ತಿದ್ದಾಗ ಮಂಡಿನೋವು ಕಾಣಿಸಿಕೊಂಡಿತ್ತು. ಅವರು ಸಿಡ್ನಿಯಲ್ಲಿ ರವಿವಾರ ನಡೆದಿದ್ದ ಅಂತಿಮ ಪಂದ್ಯದಿಂದ ಹೊರಗುಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News