ಐಸಿಸಿ ಭ್ರಷ್ಟಾಚಾರ ವಿರೋಧಿ ಸಮಿತಿಗೆ ದ್ರಾವಿಡ್ ಆಯ್ಕೆ
Update: 2016-02-04 23:48 IST
ದುಬೈ, ಫೆ.4: ಐಸಿಸಿ ಭ್ರಷ್ಟಾಚಾರ ವಿರೋಧಿ ಮೇಲ್ವಿಚಾರಣೆ ಗುಂಪಿನ ನೂತನ ಸದಸ್ಯರಾಗಿ ಭಾರತದ ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್ ಗುರುವಾರ ನೇಮಕವಾಗಿದ್ದಾರೆ.
ಮೇಲ್ವಿಚಾರಣೆ ಗುಂಪಿನಲ್ಲಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಹಾಗೂ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ಕಾನೂನು ತಜ್ಞರಾದ ಲೂಯಿಸ್ ವೆಸ್ಟನ್ ಹಾಗೂ ಸ್ವತಂತ್ರ ಭ್ರಷ್ಟಾಚಾರ ವಿರೋಧಿ ಸಮಿತಿಯ ಸಲಹೆಗಾರ ಜಾನ್ ಅಬಾಟ್, ಭ್ರಷ್ಟಾಚಾರ ವಿರೋಧಿ ಘಟಕದ ಚೇರ್‌ಮೆನ್ ಸರ್ ರಾನಿ ಫ್ಲಾಂಗನ್ ಹಾಗೂ ಐಸಿಸಿ ಸಿಇಒ ಡೇವಿಡ್ ರಿಚರ್ಡ್‌ಸನ್ ಅವರಿದ್ದಾರೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ದ್ರಾವಿಡ್ ಸದ್ಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್‌ನಲ್ಲಿ ಭಾರತೀಯ ತಂಡಕ್ಕೆ ಕೋಚ್ ನೀಡುತ್ತಿದ್ದಾರೆ.