×
Ad

ಆಸ್ಟ್ರೇಲಿಯ ಟ್ವೆಂಟಿ-20 ತಂಡಕ್ಕೆ ಸ್ಮಿತ್ ನಾಯಕ?

Update: 2016-02-08 23:01 IST

ಮೆಲ್ಬೋರ್ನ್,ಫೆ.8: ಐಸಿಸಿ ಟ್ವೆಂಟಿ-20 ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ಸಮಯ ವಿರುವ ಕಾರಣ ಆಸ್ಟ್ರೇಲಿಯ ಕ್ರಿಕೆಟ್ ತಂಡ ಗಾಯಾಳು ಆ್ಯರೊನ್ ಫಿಂಚ್ ಬದಲಿಗೆ ಟೆಸ್ಟ್ ತಂಡದ ನಾಯಕ ಸ್ಟೀವನ್ ಸ್ಮಿತ್‌ರನ್ನು ಟ್ವೆಂಟಿ-20 ತಂಡದ ನಾಯಕನನ್ನಾಗಿ ನೇಮಿಸಲು ಚಿಂತನೆ ನಡೆಸುತ್ತಿದೆ ಎಂದು ‘ದಿ ಏಜ್’ ದಿನಪತ್ರಿಕೆ ಸೋಮವಾರ ವರದಿ ಮಾಡಿದೆ.

ಇದೀಗ ಮಂಡಿನೋವಿನಿಂದ ಬಳಲುತ್ತಿರುವ ಆರಂಭಿಕ ದಾಂಡಿಗ ಫಿಂಚ್ ಸೆಪ್ಟಂಬರ್ 2014ರಲ್ಲಿ ಟ್ವೆಂಟಿ-20 ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಕೇವಲ ಆರು ಬಾರಿ ಆಸ್ಟ್ರೇಲಿಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.

ಆಸ್ಟ್ರೇಲಿಯ ಐದು ಬಾರಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಿದ್ದು, ಈ ತನಕ ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ. 2010ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದರೂ ಇಂಗ್ಲೆಂಡ್ ವಿರುದ್ಧ ಶರಣಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News