×
Ad

ಪ್ರೊ ಕಬಡ್ಡಿ: ಪಾಟ್ನಾ, ಬೆಂಗಾಳಕ್ಕೆ ಜಯ

Update: 2016-02-08 23:49 IST

ಕೋಲ್ಕತಾ, ಫೆ.8: ಪ್ರೊ ಕಬಡ್ಡಿ ಟೂರ್ನಿಯಲ್ಲಿ ಇಂದು ಪಾಟ್ನಾ ಪಿರೆಟ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಜಯ ಗಳಿಸಿದೆ.
ಹದಿನೇಳನೆ ಪಂದ್ಯದಲ್ಲಿ ಪಾಟ್ನಾ ತಂಡ ತೆಲುಗು ಟೈಟಾನ್ಸ್‌ನ್ನು 29-25 ಅಂತರದಿಂದ ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್  ತಂಡ ದಬಾಂಗ್ ದಿಲ್ಲಿ ವಿರುದ್ಧ 34-17 ಅಂತರದಲ್ಲಿ ಜಯ ಸಾಧಿಸಿತು.
ಇದರೊಂದಿಗೆ ಬೆಂಗಾಲ್ ಮತ್ತು ಪಾಟ್ನಾ ತಂಡ 4 ಪಂದ್ಯಗಳಲ್ಲೂ ಜಯ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಹಂಚಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News