ಮೊದಲ ಟ್ವೆಂಟಿ-20 ಪಂದ್ಯ; ರಜೀತಾ-ಶನಕಾ ದಾಳಿಗೆ ಧೋನಿ ಪಡೆ ತತ್ತರ ; ಲಂಕೆಗೆ ಐದು ವಿಕೆಟ್‌ಗಳ ಜಯ

Update: 2016-02-09 18:48 GMT

 

ಪುಣೆ, ಫೆ.9: ಆಸ್ಟ್ರೇಲಿಯ ವಿರುದ್ಧ ಕ್ಲೀನ್ ಸ್ವೀಪ್ ಗೆಲುವಿನ ಖುಶಿಯಲ್ಲಿದ್ದ ಟೀಮ್ ಇಂಡಿಯಾ ಇಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಆಘಾತ ಅನುಭವಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತವನ್ನು 18.5 ಓವರ್‌ಗಳಲ್ಲಿ 101 ರನ್‌ಗಳಿಗೆ ನಿಯಂತ್ರಿಸಿದ ಶ್ರೀಲಂಕಾ ತಂಡ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 105 ರನ್ ಗಳಿಸಿ ಗೆಲುವಿನ ನಗೆ ಬೀರಿತು.
 ಚೊಚ್ಚಲ ಪಂದ್ಯ ಆಡಿದ ಶ್ರೀಲಂಕಾದ ಮಧ್ಯಮ ವೇಗದ ಯುವ ಬೌಲರ್ ಕಸುನಾ ರಜೀತಾ(3-29) ಮತ್ತು ಎರಡನೆ ಪಂದ್ಯವನ್ನಾಡುತ್ತಿರುವ ದಸುನ್ ಶನಕಾ (3-16)ದಾಳಿಗೆ ಸಿಲುಕಿದ ಟೀಮ್ ಇಂಡಿಯಾ ಬೇಗನೆ ಇನಿಂಗ್ಸ್ ಮುಗಿಸಿತು. 22ರ ಹರೆಯದ ಕಸುನಾ ರಜೀತಾ ಮೊದಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗೆಲುವಿಗೆ ಸುಲಭ ಸವಾಲನ್ನು ಪಡೆದ ಶ್ರೀಲಂಕಾ ಅಗ್ರ ಸರದಿಯ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತ್ತು. ಆರಂಭಿಕ ದಾಂಡಿಗರಾದ ನಿರೋಶಾನ್ ದಿಕ್ವೆಲ್ಲಾ(4) ಮತ್ತು ಧನಿಷ್ಕಾ ಗುಣತಿಲಕ(9) ಅವರನ್ನು ಬೇಗನೆ ಪೆವಿಲಿಯನ್‌ಗೆ ಅಟ್ಟಿ ನೆಹ್ರಾ ಭಾರತಕ್ಕೆ ಆರಂಭದಲ್ಲಿ ಮೇಲುಗೈ ಸಾಧಿಸಲು ನೆರವಾದರು. ಆದರೆ ನಾಯಕ ದಿನೇಶ್ ಚಾಂಡಿಮಾಲ್(35), ಕಪುಗೆಡೆರಾ(25) ಮತ್ತು ಸಿರಿವರ್ಧನಾ (ಔಟಾಗದೆ 21) ಎರಡಂಕೆಯ ಸ್ಕೋರ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತ 101ಕ್ಕೆ ಆಲೌಟ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ 18.5 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟಾಗಿತ್ತು. ಆಲ್‌ರೌಂಡರ್ ಆರ್ ಅಶ್ವಿನ್(ಔಟಾಗದೆ 31) ,ಸುರೇಶ್ ರೈನಾ (20) ಮತ್ತು ಯುವರಾಜ್ ಸಿಂಗ್(10) ಇವರನ್ನು ಹೊರತುಪಡಿಸಿದರೆ ತಂಡದ ಉಳಿದ ಆಟಗಾರರಿಂದ ಎರಡಂಕೆಯ ಸ್ಕೋರ್ ದಾಖಲಾಗಲಿಲ್ಲ. ಅಶ್ವಿನ್ ಮತ್ತು ನೆಹ್ರಾ 9ನೆ ವಿಕೆಟ್‌ಗೆ 28 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 100ಕ್ಕೆ ತಲುಪಿಸಿದರು.
  ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮ ಮೊದಲ ಓವರ್‌ನ ಎರಡನೆ ಎಸೆತದಲ್ಲಿ ರಜೀತಾಗೆ ವಿಕೆಟ್ ಒಪ್ಪಿಸಿದರು. ಖಾತೆ ತೆರೆಯದೆ ರೋಹಿತ್ ನಿರ್ಗಮಿಸಿದರು. ತೆರೆವಾದ ಜಾಗಕ್ಕೆ ಆಗಮಿಸಿದ ಅಜಿಂಕ್ಯ ರಹಾನೆ ಒಂದು ಬೌಂಡರಿ ಬಾರಿಸಿದರು. ಆದರೆ ಆ ಓವರ್‌ನ ಅಂತಿಮ ಎಸೆತದಲ್ಲಿ ಚಾಂಡಿಮಾಲ್‌ಗೆ ಕ್ಯಾಚ್ ನೀಡಿದರು. 5 ರನ್‌ಗೆ ಭಾರತದ ಎರಡು ವಿಕೆಟ್‌ಗಳು ಪತನಗೊಂಡಿತು.
ರನ್ ಗಳಿಸಲು ಭಾರತದ ದಾಂಡಿಗರು ಪರದಾಡಿದರು. ಶಿಖರ್ ಧವನ್ ಮಿಂಚಲಿಲ್ಲ. 11 ಓವರ್‌ಗಳಲ್ಲಿ 58 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡ ಭಾರತದ ಸ್ಕೋರ್ 100 ತಲುಪುವುದು ಅನುಮಾನವಿತ್ತು. ಆದರೆ ಅಶ್ವಿನ್ ರೈನಾ ಮತ್ತು ಯುವರಾಜ್ ಕೊಡುಗೆಯ ನೆರವಿನಲ್ಲಿ ತಂಡದ ಮೊತ್ತ 100ರ ಗಡಿ ದಾಟಿತು.
   
ರೋಹಿತ್ ಶರ್ಮ (0) ಮೊದಲ ಓವರ್‌ನ 2ನೆ ಎಸೆತದಲ್ಲಿ ರಜೀತಾಗೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್(9), ಅಜಿಂಕ್ಯ ರಹಾನೆ(4), ಎಂಎಸ್ ಧೋನಿ(2), ಹಾರ್ದಿಕ್ ಪಾಂಡ್ಯ (2) ಮತ್ತು ರವೀಂದ್ರ ಜಡೇಜ(6), ಆಶೀಷ್ ನೆಹ್ರಾ(6)ಬೇಗನೆ ಔಟಾದರು.

ಸ್ಕೋರ್ ವಿವರ
ಭಾರತ: 18.5 ಓವರ್‌ಗಳಲ್ಲಿ 101 ರನ್‌ಗೆ ಆಲೌಟ್

ರೋಹಿತ್ ಶರ್ಮ ಸಿ ಚಾಮೀರಾ ಬಿ ರಜಿತಾ    0
ಶಿಖರ್ ಧವನ್ ಸಿ ಗುಣತಿಲಕ ಬಿ ರಜಿತಾ       9
ರಹಾನೆ ಸಿ ಚಾಂಡಿಮಾಲ್ ಬಿ ರಜಿತಾ 4
ಸುರೇಶ್ ರೈನಾ ಬಿ ಶನಕಾ 20
ಯುವರಾಜ್ ಸಿಂಗ್ ಸಿ ಮತ್ತು ಬಿ ಚಾಮೀರಾ 10
ಎಂಎಸ್ ಧೋನಿ ಸಿ ಡಿಕ್‌ವೆಲ್ಲಾ ಬಿ ಶನಕಾ 2
ಪಾಂಡ್ಯ ಎಲ್‌ಬಿಡಬ್ಲೂ ಶನಕ 2
ಜಡೇಜ ಎಲ್‌ಬಿಡಬ್ಲೂ ಸೇನಾನಾಯಕೆ 6
ಅಶ್ವಿನ್ ಔಟಾಗದೆ 31
ನೆಹ್ರಾ ಸಿ ಸಿರಿವರ್ಧನ ಬಿ ಚಾಮೀರಾ 6
ಬುಮ್ರಾ ರನೌಟ್ 0
ಇತರ 11
 ವಿಕೆಟ್ ಪತನ: 1-0, 2-5, 3-32, 4-49, 5-51, 6-53, 7-58, 8-72, 9-100, 10-101.
ಬೌಲಿಂಗ್:

ರಜಿತಾ 4-0-29-3
ಪೆರೇರಾ 3-1-10-0
ಸೇನಾನಾಯಕೆ 3-0-18-1
ಚಾಮೀರಾ 3.5-0-14-2
ಶನಕಾ 3-0-16-3
ಪ್ರಸನ್ನ 2-0-11-0

ಶ್ರೀಲಂಕಾ: 18 ಓವರ್‌ಗಳಲ್ಲಿ 105/5
ಡಿಕ್‌ವೆಲ್ಲ ಸಿ ಧವನ್ ಬಿ ನೆಹ್ರಾ 4
ಗುಣತಿಲಕ ಸಿ ಧವನ್ ಬಿ ನೆಹ್ರಾ 9
ಚಾಂಡಿಮಾಲ್ ಎಲ್‌ಬಿಡಬ್ಲೂ ರೈನಾ 35
ಕಪುಗಡೆರಾ ಎಲ್‌ಬಿಡಬ್ಲೂ ಅಶ್ವಿನ್ 25
ಸಿರಿವರ್ಧನ ಔಟಾಗದೆ 21
ಶನಕಾ ಸಿ ರೈನಾ ಬಿ ಅಶ್ವಿನ್ 3
ಪ್ರಸನ್ನ ಔಟಾಗದೆ 3
ಇತರ 5
ವಿಕೆಟ್ ಪತನ: 1-4, 2-23, 3-62, 4-84, 5-91.
ಬೌಲಿಂಗ್:
ಆಶೀಷ್ ನೆಹ್ರಾ 3-0-21-2
ಬುಮ್ರಾ 4-1-19-0
ರವೀಂದ್ರ ಜಡೇಜ 3-0-18-0
ಪಾಂಡ್ಯ 3-0-18-0
ಅಶ್ವಿನ್ 3-0-13-2
ರೈನಾ 2-0-13-1.
.ಪಂದ್ಯಶ್ರೇಷ್ಠ: ಕಸುನಾ ರಜೀತಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News