ರಾಜ್ಯದ ಪ್ರತಿಭೆಗಳಿಗೆ ಬೌಲಿಂಗ್ ದಂತಕತೆ ಜೆಫ್ ಥಾಮ್ಸನ್ ತರಬೇತಿಯ ಅವಕಾಶ

Update: 2016-02-11 11:18 GMT

ಬೆಂಗಳೂರು , ಫೆ 11 : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಹಾಗು ಐಡಿಬಿಐ ಫೆಡರಲ್ ಇನ್ಸುರೆನ್ಸ್ ಕಂಪೆನಿ  ಮಾಜಿ ಆಸೀಸ್ ವೇಗದ ಬೌಲಿಂಗ್ ದಂತಕತೆ ಜೆಫ್ರಿ ಥಾಮ್ಸನ್  ಅವರೊಂದಿಗೆ ಬೌಲಿಂಗ್ ತರಬೇತಿ ಸಂಸ್ಥೆಯೊಂದನ್ನು ಪ್ರಾರಂಭಿಸಲು ಒಪ್ಪಂದ ಮಾಡಿಕೊಂಡಿವೆ. ರಾಜ್ಯದಲ್ಲಿ ಎಳೆಯ ಬೌಲಿಂಗ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ಹಾಗು ತರಬೇತಿ ನೀಡುವುದು ಈ ನೂತನ ಸಂಸ್ಥೆಯ ಉದ್ದೇಶ. ಸ್ಥಳೀಯ ತರಬೇತುದಾರರಾಗಿ ರೋಜರ್ ಬಿನ್ನಿ ಹಾಗು ಎ. ರಘುರಾಮ್ ಅವರು ಮಾರ್ಗದರ್ಶನ ನೀಡಲಿದ್ದಾರೆ. 
ಈ ಸಂಬಂಧ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜೆಫ್ರಿ ಥಾಮ್ಸನ್ ಭಾಗವಹಿಸಿದ್ದರು. 
ಈ ಸಂದರ್ಭದಲ್ಲಿ ತಮ್ಮ ಕ್ರಿಕೆಟ್ ಬದುಕಿನ ಅನುಭವಗಳನ್ನು ಹಾಗು ನಿವೃತ್ತಿಯ ಬಳಿಕದ ಕೋಚಿಂಗ್ ನ ಕುರಿತ ಸ್ವಾರಸ್ಯಕರ ವಿಷಯಗಳನ್ನು ಜೆಫ್ರಿ ಹಂಚಿಕೊಂಡರು. ಕೆಪಿಎಲ್ ನ ಮಂಗಳೂರು ಯುನೈಟೆಡ್ ತಂಡದ ಮಾಲಕ ಬಿ.ಎಂ.ಫಾರೂಕ್ ಅವರು ಈ ಸಂದರ್ಭದಲ್ಲಿ ಜೆಫ್ರಿ ಅವರನ್ನು ಭೇಟಿಯಾಗಿ ಮಂಗಳೂರು ತಂಡಕ್ಕೆ ಉತ್ತಮ ಬೌಲಿಂಗ್ ಪ್ರತಿಭೆಗಳನ್ನು ರೂಪಿಸಲು ನೆರವಾಗಬೇಕೆಂದು ಕೋರಿದರು. 
 

ಕೆಎಸ್ ಸಿಎ ಅಧ್ಯಕ್ಷ ಅಶೋಕ್ ಆನಂದ್, ಕಾರ್ಯದರ್ಶಿ ಬೃಜೇಶ್ ಪಟೇಲ್ , ಸದಸ್ಯರಾದ ಸಂತೋಷ್ ಮೆನನ್, ವಿನಯ್ , ಮಾಜಿ ಕ್ರಿಕೆಟಿಗರಾದ ಜಿ. ವಿಶ್ವನಾಥ್ , ಇ. ಪ್ರಸನ್ನ, ಅಥ್ಲೀಟ್ ರೀತ್ ಅಬ್ರಹಾಂ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News