ಅಂಪೈರ್ ರವೂಫ್‌ಗೆ ನಿಷೇಧ; ಪಾಕ್ ಕ್ರಿಕೆಟ್‌ನ ವರ್ಚಸ್ಸಿಗೆ ಧಕ್ಕೆ

Update: 2016-02-13 18:43 GMT

 ಕರಾಚಿ, ಫೆ.13: ಪಾಕ್‌ನ ಅಂಪೈರ್ ಅಸದ್ ರವೂಫ್ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಹಗರಣದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಕ್ರಿಕೆಟ್‌ನ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಪಾಕ್‌ನ ಮಾಧ್ಯಮ ‘ದಿ ನ್ಯಾಷನಲ್ ’ಬಣ್ಣಿಸಿದೆ.
 ‘‘ಅಂಪೈರ್ ಔಟ್’’ ಸಂಪಾದಕೀಯದಲ್ಲಿ ಪಾಕಿಸ್ತಾನದ ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿಕೊಂಡ ವಿಚಾರವು ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ನೋವುಂಟು ಮಾಡಿತ್ತು. ಇದೀಗ ವಿಶ್ವದ ಅಗ್ರ ಅಂಪೈರ್‌ಗಳಲ್ಲಿ ಒಬ್ಬರಾಗಿರುವ ಪಾಕ್‌ನ ರವೂಫ್ ಅವರು ಪಾಕಿಸ್ತಾನದ ಕ್ರಿಕೆಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆಯನ್ನುಂಟು ಮಾಡಿದ್ದಾರೆ.
ಭ್ರಷ್ಟಾಚಾರ ಮತ್ತು ಕೆಟ್ಟ ನಡೆತೆಯ ಕಾರಣಕ್ಕಾಗಿ ಬಿಸಿಸಿಐ ಐದು ವರ್ಷಗಳ ನಿಷೇಧ ವಿಧಿಸಿದೆ.
  ರವೂಫ್ ಐಸಿಸಿ ಎಲೈಟ್ ಪ್ಯಾನಲ್‌ನ ಅಂಪೈರ್ ಆಗಿ ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2013ರ ಐಪಿಎಲ್ ಆವೃತ್ತಿಯ ವೇಳೆ ಮ್ಯಾಚ್ ಫಿಕ್ಸಿಂಗ್‌ಗೆ ನೆರವಾಗಲು ಬುಕ್ಕಿಗಳಿಂದ ದುಬಾರಿ ಬೆಲೆಬಾಳುವ ಗಿಫ್ಟ್ ಪಡೆದ ಆರೋಪ ಹೊತ್ತಿದ್ದಾರೆ.
‘‘ ನನಗೆ ಕ್ರಿಕೆಟ್‌ಗೆ ನಿಷೇಧ ಹೇರುವ ಅಧಿಕಾರ ಬಿಸಿಸಿಐಗೆ ಇಲ್ಲ. ನನ್ನ ವಿರುದ್ಧ ಇರುವ ಆರೋಪದಿಂದ ಮುಕ್ತಗೊಳ್ಳಲು ಹೋರಾಟ ನಡೆಸುವೆನು’’ ಎಂದು ಅಂಪೈರ್ ಅಸದ್‌ರವೂಫ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News