ಸೌತ್ ಏಷ್ಯನ್ ಗೇಮ್ಸ್: ಭಾರತದ ಶೂಟರ್‌ಗಳಿಂದ ಕ್ಲೀನ್ ಸ್ವೀಪ್

Update: 2016-02-13 19:01 GMT

ಗುವಾಹಟಿ, ಫೆ.13: ಇಲ್ಲಿ ನಡೆಯುತ್ತಿರುವ ಸೌತ್ ಏಷ್ಯನ್ ಗೇಮ್ಸ್‌ನ ಶೂಟಿಂಗ್ ವಿಭಾಗದಲ್ಲಿ ಭಾರತದ ಶೂಟರ್‌ಗಳು ಶನಿವಾರ ಪ್ರಾಬಲ್ಯ ಮೆರೆೆದಿದ್ದಾರೆ. ಕ್ಲೀನ್ ಸ್ವೀಪ್ ಸಾಧಿಸಿದ್ದಾರೆ.
 ಪುರುಷರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಓಂಕಾರ್ ಸಿಂಗ್ , ಮಹಿಳೆಯರ 25 ಮೀಟರ್ ಪಿಸ್ತೂಲ್‌ನಲ್ಲಿ ರಾಯಿ ಸರ್ನೊಬಾತ್‌ಮತ್ತು 50 ಮೀ.ಏರ್ ರೈಫಲ್ 3 ಪೊಸಿಸನ್‌ನಲ್ಲಿ ಅಂಜುಮ್ ವೌಡಿಗಿಲ್ ಚಿನ್ನ ಗಳಿಸಿದ್ದಾರೆ.
ಶೂಟಿಂಗ್‌ನ 3 ಟೀಮ್ ಇವೆಂಟ್‌ಗಳಲ್ಲೂ ಭಾರತ ಅಗ್ರಸ್ಥಾನ ಪಡೆದಿದೆ.
ಪಾಕಿಸ್ತಾನದ ಕಲೀಮುಲ್ಲಾ( ಪುರುಷರ 10 ಮೀ ಏರ್ ಪಿಸ್ತೂಲ್) ಬೆಳ್ಳಿ ಜಯಿಸಿರುವುದು ಹೊರತುಪಡಿಸಿದರೆ ಉಳಿದೆಲ್ಲ ಪದಕಗಳನ್ನು ಭಾರತ ಬಾಚಿಕೊಂಡಿದೆ.
 ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಆರು ಶೂಟರ್‌ಗಳನ್ನು ಒಳಗೊಂಡ ಭಾರತದ ಶೂಟರ್‌ಗಳು ಈ ತನಕ 18 ಚಿನ್ನ, 8 ಬೆಳ್ಳಿ ಮತ್ತು 8 ಕಂಚು ಜಯಿಸಿದ್ದಾರೆ.
ಪುರುಷರ 10 ಮೀಟರ್ ಇವೆಂಟ್‌ನಲ್ಲಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಗುರುಪ್ರೀತ್ ಸಿಂಗ್ ಕಳಪೆ ಪ್ರದರ್ಶನ ನೀಡಿದ್ದಾರೆ. 6ನೆ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಸ್ಪರ್ಧಿಸಿದ್ದ ಓಂಕಾರ್ ಚಿನ್ನ, ಜಿತೇಂದ್ರ ವಿಭೂತೆ ಕಂಚು ಪಡೆದಿದ್ದಾರೆ.
 ಓಂಕಾರ್, ಗುರುಪ್ರೀತ್, ಮತ್ತು ಜಿತೇಂದ್ರ ಅವರನ್ನೊಳಗೊಂಡ ಶೂಟರ್‌ಗಳ ತಂಡ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದಿದೆ.
ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಅನುರಾಜ್ ಸಿಂಗ್ ಚಿನ್ನ, ಅನೀಸಾ ಸಯ್ಯದ್ ಬೆಳ್ಳಿ ಮತ್ತು ಪಾಕಿಸ್ತಾನದ ಫರ್ಹತ್ ನಸ್ರೀನಾ ಕಂಚು ಹಂಚಿಕೊಂಡರು.
ಮಹಿಳೆಯರ ಟೀಮ್ ಇವೆಂಟ್‌ನಲ್ಲಿ ಸರ್ನೊನಾತ್,ಅನೀಸಾ ಮತ್ತು ಅನುರಾಜ್ ಅವರನ್ನೊಳಗೊಂಡ ಭಾರತದ ಮಹಿಳೆಯರ ತಂಡ ಚಿನ್ನ, ಶ್ರೀಲಂಕಾ ಬೆಳ್ಳಿ ಮತ್ತು ಪಾಕಿಸ್ತಾನ ಕಂಚು ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News