3ನೆ ಟ್ವೆಂಟಿ-20 ಪಂದ್ಯ:ಅಶ್ವಿನ್ ಸ್ಪಿನ್ ದಾಳಿಗೆ ಸಿಂಹಳೀಯರ ನಿರುತ್ತರ : ಭಾರತಕ್ಕೆ ಲಂಕೆಯ ವಿರುದ್ಧ ಸರಣಿ ಜಯ

Update: 2016-02-14 17:50 GMT

 ವಿಶಾಖಪಟ್ಟಣ, ಫೆ.14: ಪ್ರವಾಸಿ ಶ್ರೀಲಂಕಾ ವಿರುದ್ಧ ಸರಣಿಯ ಮೂರನೆ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ಗೆಲುವಿಗೆ 83 ರನ್ ಗಳಿಸಬೇಕಿದ್ದ ಭಾರತ ಒಂದು ವಿಕೆಟ್ ನಷ್ಟದಲ್ಲಿ ಇನ್ನೂ 37 ಎಸೆತಗಳು ಬಾಕಿ ಇರುವಾಗಲೇ 84 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಶಿಖರ್ ಧವನ್ ಔಟಾಗದೆ 46 ರನ್(46ಎ, 5ಬೌ, 1ಸಿ), ಅಜಿಂಕ್ಯ ರಹಾನೆ ಔಟಾಗದೆ 22 ರನ್(24ಎ, 1ಬೌ), ಮತ್ತು ರೋಹಿತ್ ಶರ್ಮ 13 ರನ್(13ಎ, 1ಬೌ,1ಸಿ) ಗಳಿಸಿದರು.
 82ಕ್ಕೆ ಆಲೌಟ್: ಇದಕ್ಕೂ ಮೊದಲು ಶ್ರೀಲಂಕಾ ತಂಡ 18 ಓವರ್‌ಗಳಲ್ಲಿ 82 ರನ್‌ಗಳಿಗೆ ಆಲೌಟಾಗಿತ್ತು.
ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (4-1-8-4) ಅಪೂರ್ವ ಪ್ರದರ್ಶನ ನೀಡಿ ಲಂಕೆಯನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ನೆರವಾದರು. ಟಾಸ್ ಜಯಿಸಿ ಶ್ರೀಲಂಕಾವನ್ನು ಬ್ಯಾಟಿಂಗ್‌ಗೆ ಇಳಿಸಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಒಟ್ಟು ಏಳು ಮಂದಿ ಬೌಲರ್‌ಗಳನ್ನು ದಾಳಿಗೆ ಇಳಿಸಿ ಲಂಕೆಯನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
 ದಾಂಡಿಗರಾದ ಶಾನಕ(19) ಮತ್ತು ತಿಸ್ಸಾರ ಪೆರೆರಾ(12) ಮಾತ್ರ ಎರಡಂಕೆಯ ಸ್ಕೋರ್ ದಾಖಲಿಸಿದರು. ಅಶ್ವಿನ್ ಅವರ ಮೊದಲ ಓವರ್‌ನ ಮೂರನೆ ಎಸೆತದಲ್ಲಿ ಆರಂಭಿಕ ದಾಂಡಿಗ ಡಿಕ್ವೆಲ್ಲಾಗೆ (1) ನಾಯಕ ಧೋನಿ ಪೆವಿಲಿಯನ್ ಹಾದಿ ತೋರಿಸಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಅಶ್ವಿನ್ ಅವರು ಆರಂಭಿಕ ದಾಂಡಿಗ ದಿಲ್ಶನ್ (1) ವಿಕೆಟ್ ಕೆಡವಿದ್ದರು. ಬಳಿಕ ಚಾಂಡಿಮಲ್(8) ಮತ್ತು ಗುರುರತ್ನೆ (4) ವಿಕೆಟ್ ಪಡೆಯುವುದರೊಂದಿಗೆ ಲಂಕೆ 4.2 ಓವರ್‌ಗಳಲ್ಲಿ 20 ರನ್‌ಗಳಿಗೆ 4 ವಿಕೆಟ್ ಕಳೆೆದುಕೊಂಡಿತ್ತು.
ಸ್ಕೋರ್ ಪಟ್ಟಿ
 ಶ್ರೀಲಂಕಾ 18 ಓವರ್‌ಗಳಲ್ಲಿ ಆಲೌಟ್   82
 ದಿಕ್ವೆಲ್ಲಾ ಸ್ಟಂಪ್ಡ್ ಧೋನಿ ಬಿ ಅಶ್ವಿನ್      01
ದಿಲ್ಶನ್ ಎಲ್‌ಬಿಡಬ್ಲು ಬಿ ಅಶ್ವಿನ್           01
 ಚಾಂಡಿಮಲ್ ಸಿ ಪಾಂಡ್ಯ ಬಿ ಅಶ್ವಿನ್     08
ಗುಣರತ್ನೆ ಸಿ ರೈನಾ ಬಿ ಅಶ್ವಿನ್           04
 ಸಿರಿವರ್ಧನೆ ಬಿ ನೆಹ್ರಾ                     04
  ಶನಕಾ ಬಿ ಜಡೇಜ                         19
 ಪ್ರಸನ್ನ ರನೌಟ್(ಜಡೇಜ)                 09
 ತಿಸ್ಸಾರಾ ಪೆರೆರಾ ಸಿ ಜಡೇಜ ಬಿ ರೈನಾ 12
ಸೇನನಾಯಕೆ ಸಿ ಧೋನಿ ಬಿ ರೈನಾ     08
 ಚಾಮೇರಾ ಔಟಾಗದೆ                     09
ಫೆರ್ನಾಂಡೊ ಬಿ ಬುಮ್ರಾ                  01
ಇತರೆ06
ವಿಕೆಟ್ ಪತನ: 1-2, 2-3, 3-12, 4-20, 5-21, 6-48, 7-54, 8-72, 9-73, 10-82
ಬೌಲಿಂಗ್ ವಿವರ
ಅಶ್ವಿನ್       4 -1-08-4
ನೆಹ್ರಾ       2-0-17-1
ಬುಮ್ರಾ     3-0-10-1
 ಜಡೇಜ     4-1-11-1
ಯುವರಾಜ್ 1-0-15-0
ಪಾಂಡ್ಯ     2-0-13-0
ರೈನಾ      2-0-06-2
ಭಾರತ 13.5 ಓವರ್‌ಗಳಲ್ಲಿ 84/1
ರೋಹಿತ್ ಶರ್ಮ ಎಲ್‌ಬಿಡಬ್ಲು ಬಿ ಚಾಮೆರಾ 13
ಎಸ್.ಧವನ್ ಔಟಾಗದೆ       46
ಅಜಿಂಕ್ಯ ರಹಾನೆ ಔಟಾಗದೆ  22
 ಇತರೆ                          03
ವಿಕೆಟ್ ಪತನ: 1-29
ಬೌಲಿಂಗ್ ವಿವರ
 ಸೇನನಾಯಕೆ   4.0-0-22-0
ಫೆರ್ನಾಂಡೊ     2.0-0-07-0
 ಚಾಮೀರಾ      2 .0-0-14-1
 ಪ್ರಸನ್ನ         1.0-0-03-0
ಸಿರಿವರ್ಧನಾ 1.0-0-09-0
 ಗುಣರತ್ನೆ    2.5-0-22-0
            

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News