ಮೊದಲ ಟೆಸ್ಟ್: ಆಸ್ಟ್ರೇಲಿಯಕ್ಕೆ ಇನಿಂಗ್ಸ್, 52 ರನ್ ಜಯ
ವೆಲ್ಲಿಂಗ್ಟನ್, ಫೆ.15: ಇಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಆಸ್ಟ್ರೇಲಿಯ ಇಂದು ಇನಿಂಗ್ಸ್ ಮತ್ತು 52 ರನ್‌ಗಳ ಜಯ ಗಳಿಸಿದೆ.
ಪಂದ್ಯದ ನಾಲ್ಕನೆ ದಿನವಾಗಿರುವ ಸೋಮವಾರ ನ್ಯೂಝಿಲೆಂಡ್ ತಂಡ ಎರಡನೆ ಇನಿಂಗ್ಸ್‌ನಲ್ಲಿ 104.3 ಓವರ್‌ಗಳಲ್ಲಿ 327 ರನ್‌ಗಳಿಗೆ ಆಲೌಟಾಯಿತು. ಇದರೊಂದಿಗೆ ಆಸ್ಟ್ರೇಲಿಯ ಎರಡು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಪಂದ್ಯದ ಮೂರನೆ ದಿನದಾಟದಂತ್ಯಕ್ಕೆ ನ್ಯೂಝಿಲೆಂಡ್ ಎರಡನೆ ಇನಿಂಗ್ಸ್‌ನಲ್ಲಿ 62.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 178 ರನ್ ಗಳಿಸಿತ್ತು. ಇಂದು ಆಟ ಮುಂದುವರಿಸಿ ಈ ಮೊತ್ತಕ್ಕೆ 149ರನ್ ಸೇರಿಸುವಷ್ಟರಲ್ಲಿ ಆಲೌಟಾಯಿತು.
ಆಸ್ಟ್ರೇಲಿಯದ ದ್ವಿಶತಕ ವೀರ ಆ್ಯಡಮ್ ವೋಗ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆಸ್ಟ್ರೇಲಿಯದ ನಥಾನ್ ಲಿನ್(4-91), ಮಿಚೆಲ್ ಮಾರ್ಷ್(3-73), ಹಝೇಲ್‌ವುಡ್(2-75) ಮತ್ತು ಬರ್ಡ್ (1-51) ಅವರು ನ್ಯೂಝಿಲೆಂಡ್‌ಗೆ ಇನಿಂಗ್ಸ್ ಸೋಲು ತಪ್ಪಿಸಲು ಅವಕಾಶ ನೀಡಲಿಲ್ಲ.
ರವಿವಾರ ಆಟ ನಿಂತಾಗ 31 ರನ್ ಗಳಿಸಿ ಔಟಾಗದೆ ಉಳಿದಿದ್ದ ನಿಕೊಲಾಸ್ 59 ರನ್ ಗಳಿಸಿ ಔಟಾದರು. ಆಲ್‌ರೌಂಡರ್ ಆಂಡರ್ಸನ್(0) ಖಾತೆ ತೆರೆಯದೆ ನಿರ್ಗಮಿಸಿದರು. ವಾಟ್ಲಿಂಗ್(10), ಬ್ರಾಸ್‌ವೆಲ್ (14), ಕ್ರೇಗ್(ಔಟಾಗದೆ 33), ಸೌಥಿ(48), ಬೌಲ್ಟ್(12) ಹೋರಾಟ ಫಲ ನೀಡಲಿಲ್ಲ.
ಆ್ಯಡಮ್ ವೋಗ್ಸ್ ದಾಖಲಿಸಿದ ಎರಡನೆ ದ್ವಿಶತಕ ನೆರವಿನಲ್ಲಿ ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್‌ನಲ್ಲಿ 562 ರನ್ ದಾಖಲಿಸಿತ್ತು. ನ್ಯೂಝಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 183 ರನ್‌ಗಳಿಗೆ ಆಲೌಟಾಗಿತ್ತು.