ಐಒಎಸ್ ಸ್ಪೋರ್ಟ್ಸ್ ಕಂಪೆನಿಯೊಂದಿಗೆ ಐಶಾನ್ ಕಿಶನ್ ಒಪ್ಪಂದ

Update: 2016-02-15 18:20 GMT

ಹೊಸದಿಲ್ಲಿ, ಫೆ.15: ಭಾರತದ ಅಂಡರ್-19 ಕ್ರಿಕೆಟ್ ತಂಡದ ನಾಯಕ ಇಶಾನ್ ಕಿಶನ್ ಪ್ರಮುಖ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪೆನಿ ಐಒಎಸ್ ಸ್ಪೋರ್ಟ್ಸ್ ಹಾಗೂ ಎಂಟರ್‌ಟೈನ್‌ಮೆಂಟ್‌ನೊಂದಿಗೆ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಜಾರ್ಖಂಡ್‌ನ ಉದಯೋನ್ಮುಖ ಕ್ರಿಕೆಟಿಗ ಕಿಶನ್ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಕೊನೆಗೊಂಡ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ತಲುಪಲು ನೆರವಾಗಿದ್ದರು. ಕಿಶನ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ಭಾರತದ ಎರಡನೆ ಕ್ರಿಕೆಟಿಗ. ಸುರೇಶ್ ರೈನಾ ಈ ಕಂಪೆನಿಯೊಂದಿಗೆ ಸಹಿ ಹಾಕಿದ್ದಾರೆ.

ಐಒಎಸ್ ಕಿಶನ್‌ರ ಜಾಹೀರಾತು, ಕಾರ್ಪೊರೇಟ್‌ಪ್ರೊಫೈಲ್, ಪೇಟೆಂಟ್ಸ್, ಡಿಜಿಟಲ್ ರೈಟ್ಸ್ ಸಹಿತ ಹಲವು ವಿಷಯಗಳನ್ನು ನೋಡಿಕೊಳ್ಳಲಿದೆ.

17ರ ಹರೆಯದ ಎಡಗೈ ದಾಂಡಿಗ ಕಿಶನ್ ಡಿಸೆಂಬರ್ 2014ರಲ್ಲಿ ಅಸ್ಸಾಂ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಮುಂಬರುವ 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News